“ಡೇಸ್ ಆಪ್ ಬೋರಾಪುರ” ಟ್ರೇಲರ್ ಬಿಡುಗಡೆ

Published on

402 Views

“ಡೇಸ್ ಆಪ್ ಬೋರಾಪುರ” ಟ್ರೇಲರ್ ಬಿಡುಗಡೆ

ಹೊಸಬರ ಸಿನಿಮಾಗಳ ಸಾಲಲ್ಲಿ ಸೇರ್ತಿರೋ ಸಿನಿಮಾ ‘ಬೋರಾಪುರ’. ಇದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರೋ ಒಂದು ಗ್ರಾಮದ ಹೆಸರು. ಸಿನಿಮಾಕ್ಕೂ ಬೋರಾಪುರಕ್ಕೂ ಏನು ಸಂಬಂಧವೆಂದರೆ.. ಸಿನಿಮಾದಲ್ಲಿ ಬೋರಾಪುರ ಹಳ್ಳಿಯ ಜನರು, ಅವರ‌ ಕಾಯಕ ಅಲ್ಲಿನ ಜನರ ಪರಿಸ್ಥಿತಿ ಬಗ್ಗೆ, ಅದನ್ನೇ ಕಥಾವಸ್ತುವಾಗಿಟ್ಟುಕೊಂಡು ‘ಡೇಸ್ ಆಪ್ ಬೋರಾಪುರ’ ಎಂಬ ಸಿನಿಮಾವನ್ನು ಮಾಡಿದ್ದಾರೆ. ಈಗಾಗಲೇ ವಿಭಿನ್ನ ,ಆಕರ್ಷಕವಾದ ಪೋಸ್ಟರ್ ನಿಂದ ಹವಾ ಸೃಷ್ಟಿಸಿರುವ ಚಿತ್ರತಂಡ, ಚಿತ್ರೀಕರಣ ಮುಗಿಸಿ ಚಿತ್ರದ ಟ್ರೇಲರ್ ನ್ನು ಇತ್ತೀಚಿಗೆ ಬಿಡುಗಡೆಗೊಳಿಸಿದೆ. ಟ್ರೇಲರ್ ನಲ್ಲಿ ಕಾಮಿಡಿ ಮತ್ತು ಪಂಚ್ ಡೈಲಾಗ್ಸ್ ಎದ್ದು ಕಾಣಿಸುತ್ತಿದ್ದು, ಹಿನ್ನೆಲೆ ಧ್ವನಿಯನ್ನು ಯೋಗರಾಜ್ ಭಟ್ ತಮ್ಮ ಶೈಲಿಯಲ್ಲಿ ಕೊಟ್ಟಿದ್ದಾರೆ. ಹೊಸಬರಾಗಿರುವ ವಿವೇಕ್ ಚಕ್ರವರ್ತಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ‌ ಒಟ್ಟು 7 ಹಾಡುಗಳಿದ್ದು, ಅಚ್ಚುಕಟ್ಟಾಗಿ ಮೂಡಿಬಂದಿದೆ. ವಿಜಯ್ ಪ್ರಕಾಶ್ , ಬಿ.ಜಯಶ್ರೀ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ತೆಲುಗು ನಟ ಶಫಿ, ಸುಚೇಂದ್ರಪ್ರಸಾದ್, ಪ್ರಶಾಂತ್ ಸೂರ್ಯಸಿದ್ದಾ, ಅನಿತಾ ಭಟ್, ಅಮಿತಾ ರಂಗನಾಥ್ , ಪ್ರಕೃತಿ, ದಿನೇಶ್ ನಟಿಸಿದ್ದಾರೆ. ಜಗ್ಗೇಶ್ ಸೇರಿದಂತೆ ಹಲವು ನಟರು ಚಿತ್ರದ ಟ್ರೇಲರ್ ನೋಡಿ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com