ಲಹರಿ ಸಂಸ್ಥೆಯ ವಿರುದ್ಧ ದೂರು ನೀಡಿದ ದಯಾಳ್
ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯದ ‘ ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ‘ ಶಾಂತಿ ಕ್ರಾಂತಿ’ ಚಿತ್ರದ ಟ್ಯೂನ್ ಬಳಸಿಕೊಳ್ಳಲಾಗಿದೆ ಎಂದು ಲಹರಿ ವೇಲು ಕೋರ್ಟ್ ಮೆಟ್ಟಿಲು ಏರಿದು ನಿಮಗೆ ನೆನಪಿರಬಹುದು. ಅದು ಹಳೆ ವಿಷಯ ಬಿಡಿ. ಈಗ ಅದೇ ಲಹರಿ ಸಂಸ್ಥೆಯು ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಸಿನಿಮಾದಲ್ಲಿ ಮಂಕು ತಿಮ್ಮನ ಕಗ್ಗ ಹಾಡಿನ ಹಕ್ಕು ಲಹರಿ ಸಂಸ್ಥೆಯದು ಅನುಮತಿ ಇಲ್ಲದೆ ಬಳಸಿಕೊಂಡಿದ್ದೀರಾ ಎಂದು ಲಹರಿ ಸಂಸ್ಥೆಯ ಆನಂದ್ ಕರೆ ಮಾಡಿದ್ದಾರೆ. ಆಗ ದಯಾಳ್ ಪದ್ಮನಾಭನ್ ‘ಹಕ್ಕು ನಿಮ್ಮ ಬಳಿ ಇದ್ದರೆ ಅದಕ್ಕೆ ಸಾಕ್ಷಿ ಏನಿದೆ ಅದು ನನಗೆ ಕಳುಹಿಸಿಕೊಡಿ’ ಎಂದು ಹೇಳಿದ್ದಾರೆ. ಆಗ ಆ ಕಡೆಯಿಂದ ಮಂಕುತಿಮ್ಮನ ಕಗ್ಗ ಸಿಡಿ ಕವರ್ ಫೋಟೋ ಕಳುಹಿಸಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಪೂರ್ತಿ ಹಾಡನ್ನು ಬಳಸಿಕೊಂಡಿಲ್ಲ. ಒಂದೆರಡು ಸಾಲನ್ನು ಬಳಸಿಕೊಳ್ಳುವುದರಲ್ಲಿ ಏನು ತಪ್ಪು ಎಂಬುದು ದಯಾಳ್ ಪ್ರಶ್ನೆ. ಇದೇ ವಿಚಾರವಾಗಿ ನಿರ್ದೇಶಕ ದಯಾಳ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯ ತಿಳಿದ ಲಹರಿ ಕಂಪನಿಯಿಂದ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ‘ ಈ ರೀತಿಯ ಸಮಸ್ಯೆ ಮತ್ತೆ ಯಾರಿಗೂ ಆಗಬಾರದು, ನಾವು ಇಷ್ಟು ತಿಳುವಳಿಕೆ ಇದ್ದು, ನಮ್ಮ ಮೇಲೆ ಪ್ರಯೋಗ ಮಾಡುವರು, ಇನ್ನು ಹೊಸಬರಿಗೆ ಇಂತ ಪರಿಸ್ಥಿತಿ ಬಂದಾಗ ಏನು ಮಾಡಬೇಕು ಎಂದಿದ್ದಾರೆ ದಯಾಳ್ ಪದ್ಮನಾಭನ್