ಫೇಸ್ ಬುಕ್ ಲೈವ್ ನಲ್ಲಿ ‘ರಾಬರ್ಟ್’ ಸಿನಿಮಾ ಬಿಡುಗಡೆ ದಿನಾಂಕವನ್ನು ಹೇಳಿದ ದರ್ಶನ್

Published on

681 Views

ಫೇಸ್ ಬುಕ್ ಲೈವ್ ಬಂದ ನಟ ದರ್ಶನ್ ತಮ್ಮ ‘ರಾಬರ್ಟ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಯಾರು ಮನೆ ಹತ್ರ ಬರಬೇಡಿ ಎಂದು ಮನವಿ ಮಾಡಿದ್ದಾರೆ. ದರ್ಶನ್ ‌ಅಭಿಮಾನಿಗಳಿಂದ ಸಾಲು ಸಾಲು ಪ್ರಶ್ನೆಗಳ‌ ಸುರಿಮಳೆಯೇ ಬಂದಿದ್ದು, ಓಟಿಟಿ ಹಾಗೂ ರಾಬರ್ಟ್ ಚಿತ್ರದ ಬಗೆಗಿನ ಪ್ರಶ್ನೆಗಳಿಗೆ ‌ಉತ್ತರಿಸಿದ ದರ್ಶನ್ ‘ನಿರ್ಮಾಪಕರು ಎಲ್ಲಿಂದಲೋ ಕೋಟ್ಯಾಂತರ ಹಣವನ್ನು‌ ಒಟ್ಟು ಮಾಡಿ ಸಿನಿಮಾ ‌ಮಾಡುತ್ತಾರೆ. ನಾವು ನಮ್ಮ ಜೀವ‌ ಒತ್ತೆ ಇಟ್ಟು ಆ್ಯಕ್ಷನ್ ಸೀನ್ ಗಳನ್ನು ಮಾಡುತ್ತೇವೆ.

ಥಿಯೇಟರ್ ನಲ್ಲಿ ನಿಮ್ಮ ಕೂಗು, ವಿಷಲ್, ‌ಚಪ್ಪಾಳೆ ಕೇಳುವುದೇ ನಮ್ಮ ಶ್ರಮಕ್ಕೆ ಸಿಕ್ಕ ಫಲ. ಥಿಯೇಟರ್ ನಲ್ಲಿ ಈಗ ಶೇ. 50% ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದು, 100% ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಮಾರ್ಕೆಟ್ ನಲ್ಲಿ, ಮದುವೆ ಸಮಾರಂಭದಲ್ಲಿ ಜನ ಗುಂಪು‌ ಸೇರುತ್ತಿದ್ದಾರೆ. ಅದರೆ ಚಿತ್ರಮಂದಿರಗಳಲ್ಲಿ ಅವಕಾಶವಿಲ್ಲ. ಅಂಬಾನಿಯವರ 5g ಓಡಬೇಕೆಂದರೆ ಒಟಿಟಿ ಸಿನಿಮಾಗಳು, ಆನ್ ಲೈನ್ ಸಿನಿಮಾಗಳು ಬಂದರೆ ಅವರಿಗೆ ದುಡ್ಡು. ಅದೇ ಚಿತ್ರಮಂದಿರಗಳು ತೆರೆದರೆ ಒಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಅದರಿಂದ ಚಿತ್ರಮಂದಿರಗಳಲ್ಲಿ ಅವಕಾಶ ನಿರಾಕರಿಸಿರಬಹುದು.

https://fb.watch/2WOi3XN5Am/

ಚಿತ್ರಮಂದಿರದಲ್ಲಿ 50% ಅಲ್ಲ 25% ಅವಕಾಶ ಕೊಡಲಿ ನಾನು ನನ್ನ ಸಿನಿಮಾವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಿಸುತ್ತೇನೆ’ ಎಂದಿದ್ದಾರೆ ದರ್ಶನ್. ಮಾರ್ಚ್ 11 ಮಹಾಶಿವರಾತ್ರಿಯಂದು ‘ರಾಬರ್ಟ್’ ಸಿನಿಮಾ‌ ತೆರೆ ಕಾಣಲಿದೆ ಎಂದು ಹೇಳಿದ್ದಾರೆ. ದರ್ಶನ್ ‌ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾಕ್ಕೆ ಕಾಯುತ್ತಿದ್ದ ಅಭಿಮಾನಿಗಳು ದರ್ಶನ್ ಮಾತು ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com