ಅಪ್ಪಾಜಿಯವರ ಬೈಗುಳವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ದರ್ಶನ್…

Published on

359 Views

ಅಂಬರೀಶ್ ರವರು ನಮ್ಮನ್ನೆಲ್ಲಾ ಆಗಲಿ ಎರಡು ವರ್ಷಗಳಾಗಿವೆ. ಕನ್ನಡ ಚಿತ್ರರಂಗದಲ್ಲಿ ಹಿರಿಯಣ್ಣನಂತೆ ಇದ್ದ ಅಂಬರೀಶ್ ರವರು ನವೆಂಬರ್ 24ರಂದು ಇಹಲೋಕ ತ್ಯಜಿಸಿದರು. ಅವರ 2ನೇ ಪುಣ್ಯತಿಥಿ ಅಂಗವಾಗಿ‌ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿಗೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ದರ್ಶನ್ ಅಪ್ಪಾಜಿಯವರು ನಮ್ಮನ್ನು ಅಗಲಿ ಎರಡು ವರ್ಷವಾದರೂ, ಅವರು ನಮ್ಮ ಹೃದಯದಲ್ಲಿ ಅವರು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಅವರು ನಮ್ಮಗೆಲ್ಲರಿಗೂ ಹಿರಿಯ ಮಾರ್ಗದರ್ಶಕರಂತೆ ಇದ್ದರು. ನಾವು ಏನೇ ತಪ್ಪುಗಳನ್ನು ಮಾಡಿದರೂ ಬೈದು, ಬುದ್ದಿ ಹೇಳುತ್ತಿದ್ದರು. ಅವರ ಪ್ರೀತಿಯ ಬೈಗುಳವನ್ನು ಇಂದು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com