ಬೈಕ್ ಸವಾರಿ ಮಾಡಿದ ಡಿ ‘ಬಾಸ್’

Published on

392 Views

ಸ್ಯಾಂಡಲ್ ವುಡ್ ಬಾಸ್ ಯಾರು‌ ಎಂಬ ವಿವಾದ ಶುರುವಾಗಿದೆ. ದರ್ಶನ್ ಅಭಿಮಾನಿಗಳು ದರ್ಶನ್ ಬಾಸ್ ಅಂದ್ರೆ, ಯಶ್ ಅಭಿಮಾನಿಗಳು ಯಶ್ ಬಾಸ್…ಶಿವರಾಜ್ ಕುಮಾರ್ ಅಭಿಮಾನಿಗಳು ಶಿವರಾಜ್ ಕುಮಾರ್ ಬಾಸ್ ಎಂದು‌ ವಾರ್ ಶುರುಮಾಡಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದ ಶಿವರಾಜ್ ಕುಮಾರ್ ‘ ಅವರವರ ಮನೆಯಲ್ಲಿ ಅವರವರೇ ಬಾಸ್ ‘ ಎಂದು‌ ಸುಮ್ಮನಾಗಿದ್ದಾರೆ. ಯಶ್ ತನ್ನ ಬೆಂಜ್ ಕಾರಿಗೆ KA 05-MY 8055 ಎಂದು ನೊಂದಣೆ ಮಾಡಿಸಿ, ದರ್ಶನ್ ಅಭಿಮಾನಿಗಳ ಅಕ್ರೋಶಕ್ಕೆ ಗುರಿಯಾಗಿದ್ದರು. ಯಜಮಾನ ಚಿತ್ರೀಕರಣದ ವೇಳೆ ದರ್ಶನ್ ತನ್ನ ಅಭಿಮಾನಿ ಜಯಕಾಂತ್ ಅವರ ಹಾಲ್ರೇ ಡೇವಿಡ್ ಸನ್ ಬೈಕ್ ಓಡಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ದರ್ಶನ್ ಚಲಾಯಿಸಿದ ಬೈಕ್ ನಂಬ್ರ KA- 51 HD 8055. ಜಯಕಾಂತ್ ಈ ಫ್ಯಾನ್ಸಿ ನಂಬ್ರ ಪಡೆಯಲು 30 ಸಾವಿರ ಹಣ ಖರ್ಚು ಮಾಡಿದ್ದು, 3 ವಾರದ ಹಿಂದೆ ನೊಂದಣೆ ಮಾಡಿಸಿದ್ದಾರೆ. ಅಭಿಮಾನಿಯ ಬೈಕ್ ಸವಾರಿ‌ ಮಾಡಿ‌ ದರ್ಶನ್ ಬಾಸ್ ಎಂಬುದನ್ನು ಸಾಬೀತು‌ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com