ಈ ವಾರ ತೆರೆಗೆ `ದಂಡುಪಾಳ್ಯ 3’(ಪಾರ್ಟ್ |||)

Published on

640 Views

ಈ ವಾರ ತೆರೆಗೆ `ದಂಡುಪಾಳ್ಯ 3’(ಪಾರ್ಟ್ |||)

ಎಸ್‍ಆರ್‍ಟಿ ಎಂಟರ್‍ಟೈನರ್ ಬ್ಯಾನರ್‍ಅಡಿಯಲ್ಲಿ ನಿರ್ಮಾಣವಾಗಿರುವ `ದಂಡುಪಾಳ್ಯ 3`(ಪಾರ್ಟ್ |||) ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಹಿಂದೆ ದಂಡುಪಾಳ್ಯ, ದಂಡುಪಾಳ್ಯ 2 ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ಅವರೇ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ವಿಶೇಷವಾಗಿ ಈ ಚಿತ್ರಕ್ಕೆ ನವೀನ್‍ಕೃಷ್ಣ, ಗುರುರಾಜ ದೇಸಾಯಿ, ರಮೇಶ್ ಹಾಗೂ ತಬಲಾನಾಣಿ ಸಂಭಾಷಣೆ ರಚಿಸಿದ್ದಾರೆ.

ದಂಡುಪಾಳ್ಯ-2 ಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರ ಮೂಡಿಬರಲಿದ್ದು, ಆ ಚಿತ್ರದಲ್ಲಿ ಉಳಿಸಿಕೊಂಡಿದ್ದ ಒಂದಷ್ಟು ಕನ್‍ಫ್ಯೂಷನ್‍ಗಳಿಗೆ ಈ ಚಿತ್ರದ ಮೂಲಕ ಉತ್ತರ ಸಿಗಲಿದೆ.
ರಾಮ್ ತಳ್ಳೂರಿ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಶ್ರೀನಿವಾಸ ರಾಜು ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಪೂಜಾಗಾಂಧಿ, ರವಿಶಂಕರ್, ರವಿಕಾಳೆ, ನಕುಲ್ ದೇಶಪಾಂಡೆ, ಕರಿಸುಬ್ಬು, ಪೆಟ್ರೋಲ್ ಪ್ರಸನ್ನ ಸೇರಿದಂತೆ `ದಂಡುಪಾಳ್ಯ 2` ಚಿತ್ರದಲ್ಲಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ್ ಸಂಗೀತ ನೀಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com