ಚಿತ್ರೀಕರಣ ಮುಗಿಸಿದ ‘ದಾರಿ ಯಾವುದಯ್ಯ ವೈಕುಂಠಕ್ಕೆ…

Published on

527 Views

ಲಾಕ್ ಡೌನ್ ನಂತರ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಮೇಲೆ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರ ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಲಾಕ್ ಡೌನ್‌ ನಂತರ ಯಾವುದೇ ಸಮಸ್ಯೆ ಯಿಲ್ಲದೆ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಈ ಚಿತ್ರಕ್ಕೆ ಈ ಹಿಂದೆ ‘ಕೃಷ್ಣ ಗಾರ್ಮೆಂಟ್ಸ್’ ಚಿತ್ರವನ್ನು ನಿರ್ದೇಶಿಸಿದ ಸಿದ್ದು ಪೂರ್ಣಚಂದ್ರರವರು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇದು ಇವರ ಎರಡನೇ ಸಿನಿಮಾ. ಇದು ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ.ಕೊಟಗಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ.

‘ದಾರಿ ಯಾವುದಯ್ಯ ವೈಕುಂಠಕ್ಕೆ’ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ತೆರೆಗೆ ಬರಲು‌ ತಯಾರಾಗಿದೆ. ಚಿತ್ರದ ಚಿತ್ರೀಕರಣದಲ್ಲಿ 10-20 ಜನ ಶೂಟಿಂಗ್ ಸೆಟ್ ನಲ್ಲಿ ಭಾಗಿಯಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಯಿತು. ಚಿತ್ರದ ಕೆಲವೇ ದೃಶ್ಯ ಬಾಕಿ ಇದ್ದಿದ್ದರಿಂದ , ಕೆಲವೇ ದಿನಗಳಲ್ಲಿ ಚಿತ್ರೀಕರಣಗಳನ್ನು ಮುಗಿಸಿದ್ದೇವೆ ಎನ್ನುತ್ತಾರೆ ಚಿತ್ರತಂಡ.

ವಿಭಿನ್ನ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ವರ್ಧನ್ ತೀರ್ಥಹಳ್ಳಿ ನಾಯಕನಾಗಿ, ನಾಯಕಿಯಾಗಿ ‘ಶ್ರೀಮಾನ್‌ ಶ್ರೀಮತಿ’ ಧಾರಾವಾಹಿ ಖ್ಯಾತಿಯ ಅನುಷಾ ನಟಿಸಿದ್ದಾರೆ. ಇತ್ತೀಚಿಗೆ ಅನುಷಾರವರು ನಟಿಸಿದ ‘ಡಿಂಗ’ ಸಿನಿಮಾ ಕೂಡ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ‘ಅವಳು ಸುಜಾತ’ ಧಾರಾವಾಹಿಯಲ್ಲಿ ಸಾನ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೊಬ್ಬ ನಾಯಕಿಯಾಗಿ ಪೂಜಾರವರು ನಟಿಸಿದ್ದಾರೆ. ಮಿಕ್ಕಂತೆ ತಾರಾಗಣದಲ್ಲಿ ಶೀಬಾ, ಡಿ.ವಿ.ನಾಗರಾಜ್, ಸುಚಿತ್, ಪ್ರಣಯ್ ಮೂರ್ತಿ ಸಿದ್ದಾರ್ಥ್ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com