ಮತ್ತೆ ಒಂದಾದ ಡಾಲಿ ಮತ್ತೆ ಚಿಟ್ಟೆ..!!!

Published on

694 Views

ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಾಕಷ್ಟು ಕುತೂಹಲ ಮೂಡಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರದಲ್ಲಿ ಟಗರು ಖ್ಯಾತಿ ಡಾಲಿ (ಧನಂಜಯ್) ವಿಲನ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹಬ್ಬಿತ್ತು.
ಈಗ ಬಂದ ಹೊಸ ಸುದ್ದಿ ಪ್ರಕಾರ ‘ಟಗರು’ ಸಿನಿಮಾದಲ್ಲಿ ಧನಂಜಯ್ ಜೊತೆ ಚಿಟ್ಟೆ ಪಾತ್ರದಲ್ಲಿ ಕಾಣಿಸಿಕೊಂಡ ವಸಿಷ್ಠ ಸಿಂಹ ಕೂಡ ‘ಯುವರತ್ನ’ ದಲ್ಲಿ‌ ಎಂಟ್ರಿ ಕೊಡಲಿದ್ದಾರೆ. ‘ಟಗರು’ ಚಿತ್ರದಲ್ಲಿ ವಿಲನ್ ಗಳಾಗಿ ಮಿಂಚಿದ ಈ‌ ಜೋಡಿ ‘ಯುವರತ್ನ’ ದಲ್ಲೂ ತಮ್ಮ ಖದರ್ ತೋರಿಸಲಿದೆ.

ಈಗಾಗಲೇ ‘ಯುವ ರತ್ನ’ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ‘ರಾಜಕುಮಾರ’ ಸಿನಿಮಾ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಯನ್ನು ಹೊತ್ತಿದ್ದಾರೆ. ಪುನೀತ್ ಅಭಿನಯದ ‘ನಟಸಾರ್ವಭೌಮ’ ಉತ್ತಮ ರೀತಿಯಲ್ಲಿ‌ ಪ್ರದರ್ಶನ ಕಾಣುತ್ತಿತ್ತು. ಸದ್ಯ ಪುನೀತ್ ರಾಜ್‌ಕುಮಾರ್ ‘ಯುವರತ್ನ’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ‘ಯುವರತ್ನ’ ಚಿತ್ರದಲ್ಲಿ ಸಯೀಶಾ ಸೈಗಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com