ಮಂಡ್ಯ ರಾಜಕೀಯ ಕಣಕ್ಕೆ ಡಿ ಬಾಸ್

Published on

461 Views

ಮಂಡ್ಯ ರಾಜಕೀಯ ಕಣಕ್ಕೆ ಡಿ ಬಾಸ್ ಎಂಟ್ರಿ ಕೊಡ್ತಾರಂತೆ..ಯೆಸ್ ಸಾಕಷ್ಟು ವರ್ಷಗಳಿಂದ ಒಂದೇ ಫ್ಯಾಮಿಲಿಯಂತಿರೋ ಅಂಬಿ ಮತ್ತು ದರ್ಶನ್ ಕುಟುಂಬ ಈಗ ತಮ್ಮ ಪ್ರಾಭಲ್ಯವನ್ನ ರಾಜಕೀಯ ಕಣದಲ್ಲಿ ತೋರಲಿದೆ…ಸುಮಲತಾ ಚುನಾವಣೆಗೆ ಸ್ಫರ್ದಿಸಿದ್ರೆ ದರ್ಶನ್ ತಾಯಿಯ ಹಿಂದೆ ನಿಂತು ಎಲ್ಲಾ ಕೆಲಸವನ್ನ ನೋಡಿಕೊಳ್ಳಲಿದ್ದಾರಂತೆ…ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದರ್ಶನ್ ಜೊತೆ ಈ ಬಗ್ಗೆ ಮಾತುಕಥೆ ನಡೆಸಿದ್ದಾರಂತೆ….


ಸುಮಲತಾ ಅವ್ರನ್ನ ಮಮ್ಮಿ ಅಂತಾನೆ ಕರೆಯೋ ದರ್ಶನ್ ಅವ್ರ ಏಳಿಗೆಗಾಗಿ ಶ್ರಮಿಸಲು ಸಿದ್ದರಾಗಿದ್ದಾರೆ…ಸುಮಲತಾ ಒಂದೇ ಮನಸ್ಸಿನಿಂದ ಚುನಾಣೆಗೆ ನಿಲ್ತಿನಿ ಅಂತ ಹೇಳಿದ್ರೆ ಅವ್ರನ್ನ ಗೆಲ್ಲಿಸೋದೆ ದಚ್ಚು ಕಾಯಕ ಮಾಡಿಕೊಳ್ಳಲಿದ್ದಾರೆ…ಅಮ್ಮನ ಪರವಾಗಿ ಪ್ರಚಾರ ಮಾಡಿ ಗೆಲುವು ಸಾಧಿಸಲಿದ್ದಾರೆ….
ಅಂಬರೀಶ್ ಇದ್ದಾಗ ದರ್ಶನ್ ಅವ್ರನ್ನ ಹಿರಿ ಮಗನಂತೆ ನೋಡಿಕೊಳ್ತಿದ್ರು..ಸಂತೋಷವಿರಲಿ, ದುಃಖವಿರಲಿ ದಚ್ಚು ಜೊತೆಯಲ್ಲಿ ಹಂಚಿಕೊಳ್ತಿದ್ರು…ಈಗ ದರ್ಶನ್ ಹಿರಿ ಮಗನಾಗಿ ಮಾಡಬೇಕಾದ ಕರ್ತವ್ಯಗಳನ್ನ ಪೂರೈಸಲು ಮುಂದಾಗಿದ್ದಾರೆ…ಈ ಮೂಲಕವಾದ್ರು ರೆಬೆಲ್ ಸ್ಟಾರ್ ಋಣವನ್ನ ಸ್ವಲ್ಪ ಮಟ್ಟಿಗೆ ತೀರಿಸೋ ಆಲೋಚನೆ ಡಿ ಬಾಸ್ ನದ್ದು….

Copyright ©2026 . All Rights Reserved. privacy | terms Whatsapp: 9538193653 Email: hello@flixoye.com