ಡಿ ಬಾಸ್ ಅಭಿಮಾನಿಗಳಿಗೆ ಇಂದು ಹಬ್ಬ..‘ಒಡೆಯ’ನ ಟ್ರೈಲರ್ ದರ್ಬಾರ್..!

Published on

576 Views

ಡಿಸೆಂಬರ್ 12ಕ್ಕೆ ಒಡೆಯ ರಿಲೀಸ್..!
ಸದ್ಯ ಒಡೆಯ ಸಿನಿಮಾದ ಕ್ರೇಜ್ ರಾಜ್ಯಾದ್ಯಂತ ಸಿಕ್ಕಾಪಟ್ಟೇ ಜೋರಾಗಿದೆ. ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲೂ ಪೋಸ್ಟರ್​​ಗಳು ರಾರಾಜಿಸುತ್ತಿದ್ದು ಒಡೆಯನ ದರ್ಬಾರ್ ದೊಡ್ಡ ಮಟ್ಟದಲ್ಲಿಯೇ ಸೌಂಡ್ ಮಾಡ್ತಿದೆ. ಟ್ರೈಲರ್ ರಿಲೀಸ್ ಸಂಭ್ರಮವನ್ನ ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡೋಕೆ ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ. ಐವರು ಅಣ್ಣ ತಮ್ಮಂದಿರ ನಡುವಿನ ಫ್ಯಾಮಿಲಿ ಸೆಂಟಿಮೆಂಟ್ ಕತೆಯ ಸಿನಿಮಾ ಇದಾಗಿದ್ದು, ಗಜೇಂದ್ರನ ಪಾತ್ರದಲ್ಲಿ ದರ್ಶನ ಮಿಂಚಲಿದ್ದಾರೆ.

ಬಹುದಿನಗಳಿಂದ ಕಾತರದಿಂದ ಕಾದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇವತ್ತು ಬಂಪರ್ ಗಿಪ್ಟ್ ಸಿಗಲಿದೆ. ಎಂ.ಡಿ ಶ್ರೀಧರ್ ನಿರ್ದೇಶನದಲ್ಲಿ ದರ್ಶನ್ ಫ್ಯಾಮಿಲಿ ಮ್ಯಾನ್ ಆಗಿ ಅಭಿನಯಿಸಿರೋ ಬಹುನಿರೀಕ್ಷಿತ ಒಡೆಯ ಸಿನಿಮಾದ ಪವರ್​ಫುಲ್ ಟ್ರೈಲರ್ ಇಂದು ಆನಂದ್ ಆಡಿಯೋದಲ್ಲಿ ರಿಲೀಸ್ ಆಗಲಿದೆ. ಟ್ರೈಲರ್ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾತರರಾಗಿದ್ದಾರೆ.ಇನ್ನು ಪೊರ್ಕಿ, ಬುಲ್ ಬುಲ್ ಸಿನಿಮಾದ ದೊಡ್ಡ ಸಕ್ಸಸ್ ಬಳಿಕ ದರ್ಶನ್ ಮತ್ತು ಎಂ.ಡಿ ಶ್ರೀಧರ್ ಕಾಂಬಿನೇಷನ್​ನಲ್ಲಿ ಬರ್ತಿರೋ ಹ್ಯಾಟ್ರಿಕ್ ಸಿನಿಮಾ ಇದಾಗಿದ್ದು, ಮತ್ತೊಂದು ದೊಡ್ಡ ಧಮಾಕವನ್ನೇ ಸೃಷ್ಟಿಸೋ ಸಿಗ್ನಲ್ ನೀಡಿದೆ. ಚಿತ್ರ ಇದೇ ಡಿಸೆಂಬರ್ 12ರಂದು ದೇಶಾದ್ಯಂತ ಸಾಕಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಣವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com