ಮದುವೆ ಸಂಭ್ರಮದಲ್ಲಿ ಕ್ಯೂಟ್ ಜೋಡಿ…!!!

Published on

427 Views
ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ದಿಗಂತ್ ಮತ್ತು ಐಂದ್ರಿತಾ ರೇ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ನಿನ್ನೇ ನಡೆದ ಅರಶಿಣಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಪ್ರಕೃತಿಯನ್ನು ಇಷ್ಟಪಡುವ ಈ ಜೋಡಿ ಹಸಿರಿನ ನಡುವೆಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈ ಜೋಡಿಯ ಅರಶಿಣ ಶಾಸ್ತ್ರ ಬೆಂಗಳೂರಿನ ನಂದಿ ಬೆಟ್ಟದ ರೆಸಾರ್ಟ್‌ ಒಂದರಲ್ಲಿ ನಡೆದಿದೆ. ಇಂದು ವಿವಾಹ ಸಮಾರಂಭವೂ ನೆರವೇರಲಿದೆ.

ನೀಲಿಬಣ್ಣದ ಪಂಚೆಯಲ್ಲಿ ಮದುಮಗ, ಹಳದಿ ಹಾಗೂ ಬಿಳಿ ಬಣ್ಣದ ಸೀರೆಯಲ್ಲಿ ಐಂದ್ರಿತಾ ಮಿಂಚಿದ್ದಾರೆ. ಸಂಗೀತ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದ ರಾಗಿಣಿ ದ್ವಿವೇದಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದರು. ದಿಗಂತ್ ಮತ್ತು ಐಂದ್ರಿತಾ ಕೂಡ ಜೋಡಿಯಾಗಿ ಕುಣಿದರು. ತೀರಾ ಹತ್ತಿರದವರು, ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಇಂದು ಸಂಜೆ 6 ಗಂಟೆಗೆ ವಿವಾಹ ನಡೆಯಲಿದ್ದು ಬೆಂಗಾಳಿ ಹಾಗೂ ಹಿಂದು ಸಂಪ್ರದಾಯದಂತೆ ಮದುವೆ ನೆರವೇರಲಿದೆ. ಇದೇ ತಿಂಗಳ 15 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನ ನಟ ನಟಿಯರು ಗಣ್ಯರು ಭಾಗವಹಿಸಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com