ಕ್ರಿಯೇಟಿವ್ ಡೈರೆಕ್ಟರ್ ಕೃಷ್ಣ ಬೆಳ್ತಂಗಡಿ ನಿರ್ದೇಶನದ “ರಿಪ್ಪರ್‌”

Published on

833 Views

ನೈಜ ಕಥೆಯ ರಿಪ್ಪರ್ ಸಿನಿಮಾ!:
ನಿರ್ದೇಶಕ ಕೃಷ್ಣ ಬೆಳ್ತಂಗಡಿ ಅವರ ನಿರ್ದೇಶನದ
*ರಿಪ್ಪರ್* ಚಿತ್ರವು ಮಂಗಳೂರಿನ ಕುಖ್ಯಾತ ದರೋಡೆಕೋರನಾಗಿದ್ದ “ರಿಪ್ಪರ್ ಚಂದ್ರನ್” ಚಟುವಟಿಕೆ ಕುರಿತಾದ ಕಥಾನಕವನ್ನು ಹೊಂದಿದೆ. ಜೊತೆಗೆ ಪ್ರೀತಿ ಹಪಹಪಿಯ ಇನ್ನೊಂದು ಟ್ರ್ಯಾಕ್ ಒಳಗೊಂಡು ಈಗಿನ ಕಾಲಘಟ್ಟಕ್ಕೆ ಅನುಗುಣವಾಗುವಂತೆ ಚಿತ್ರಕಥೆಯನ್ನು ಹೆಣೆಯಲಾಗಿದೆ. ಮಲೆನಾಡಿನ ಚಿರಾಪುಂಜಿ ಆಗುಂಬೆ ಪರಿಸರದಲ್ಲಿ ನೈಜ ಕಥೆ ಆಧಾರಿತ ಚಿತ್ರಕ್ಕೆ ಹಲವು ಸನ್ನಿವೇಶ ಚಿತ್ರೀಕರಿಸಲಾಗಿದೆ.


ಜಿ.ಕೆ.ರಿಯಲ್ ಇಮೇಜಸ್ ಲಾಂಛನದಲ್ಲಿ “ರಿಪ್ಪರ್” ಸಿನಿಮಾ ತೆರೆ ಮೇಲೆ ಬರುತ್ತಿದೆ. ಬಣ್ಣದ ಕೊಡೆ ಸಿನಿಮಾ ನಿರ್ದೇಶಿಸಿ, ರಾಜ್ಯ ಪ್ರಶಸ್ತಿ ಪಡೆದಿರುವ ಕೃಷ್ಣ ಬೆಳ್ತಂಗಡಿ ನಿರ್ದೇಶನದ ಈ ಸಿನಿಮಾದಲ್ಲಿ ತುಳು ಸಿನಿಮಾ “ಪೆಟ್ ಕಮ್ಮಿ” ನಾಯಕ ನಟ ಶ್ರೀರಾಮ್ ನಾಯಕನಾಗಿ, ನಾಯಕಿಯಾಗಿ ಸಾನ್ವಿ ಬಣ್ಣ ಹಚ್ಚಿದ್ದಾರೆ. ಖಳನಾಯಕನ ಪಾತ್ರವನ್ನು ಕೌಸ್ತುಭ್ ಅಚ್ಚುಕಟ್ಟಾಗಿ ನಿಭಾಯಿಸಿದ್ದು, ಮುಂಬಯಿ ಬೆಡಗಿ ಅಮುಲ್ ಗೌಡ ಖಳನಾಯಕಿಯಾಗಿ ಛಾಪು ಒತ್ತಿದ್ದಾರೆ. ಅನಿಲ್ ಕುಮಾರ್ ಕ್ಯಾಮರಾ, ಹಿತನ್ ಹಾಸನ್ ಸಂಗೀತ ಹೊಸ ಭರವಸೆ ಮೂಡಿಸಿದೆ.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಡಾ ಇದೀಗ ಶೂಟಿಂಗ್ ನಡೆಯುತ್ತಿದ್ದು, ಶೇಕಡಾ 90 ರಷ್ಟು ಭಾಗ ಶೂಟಿಂಗ್ ಮುಗಿಸಿದೆ ಎಂದು ಚಿತ್ರ ತಂಡ ತಿಳಿಸಿದೆ. “ರಿಪ್ಪರ್‌” ಚಿತ್ರಕ್ಕೆ ಮಂಜು ಹುಣಸೂರು, ಪ್ರಭಾಕರ ಪ್ರಭು ಸಹಾಯಕ ನಿರ್ದೇಶಕರಾಗಿ ಕೈಜೋಡಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com