ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಕ್ಷಣಗಣನೆ..

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಸಾಕಷ್ಟು ತಯಾರಿಗಳು ನಡೆಯುತ್ತಿದ್ದು, ಸದ್ಯದಲ್ಲೇ ಚುನಾವಣಾ ದಿನಾಂಕ ನಿರ್ಧಾರವಾಗಲಿದೆ.
ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಥಾಮಸ್ ಡಿಸೋಜಾ ಅವರು ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿದ್ದು, ಪ್ರಚಾರದ ಕೆಲಸಗಳಿಗೆ ರೆಕ್ಕೆ ಬಂದಿವೆ. ಬಹುತೇಕರ ಗಮನ ಈ ಸಾರಿ ಅಧ್ಯಕ್ಷ ಗದ್ದುಗೆ ಮೇಲೆ ಕೂರುವವರು ಯಾರು ಎಂಬುದು !.
ಕರೋನ ನಂತರ ಚಿತ್ರರಂಗದ ಹಲವಾರು ಕೆಲಸಗಳು ಗರಿಗೆದರಿದ್ದು, ಅದರಲ್ಲಿ ಚುನಾವಣೆ ಸಹ ಒಂದಾಗಿದೆ.
ಚಂದನವನದ ಏಳಿಗೆಗೆ ದುಡಿಯುವ ಉತ್ತಮ ವ್ಯಕ್ತಿ ಗದ್ದುಗೆಗೆ ಏರಲಿ ಎಂಬುದು ನಮ್ ಆಶಯ.