ಮನಕಲುಕಿದ ಮನರೂಪ..!!!
ಮನೋಲೋಕದ ಹಲವು ವಿಭಿನ್ನ ರೂಪಗಳನ್ನು ಬಿಚ್ಚಿಡುವ ಮನರೂಪ ಸಿನಿಮಾ ಶುಕ್ರವಾರವಸ್ಟೇ ಬಿಡುಗಡೆಗೊ0ಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ .ಇದೊಂದು ಸೈಕಾಲಾಜಿ ತ್ರಿಲ್ಲರ್ ಸಿನಿಮಾವಾಗಿದ್ದು ಪ್ರೀತಿ ಕಾಳಜಿ ನಂಬಿಕೆ ದೊರೆಯದಿದ್ದಾಗ ಯುವ ಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಬಂದಿಯಾಗಿ ಹೇಗೆ ಬದುಕನ್ನು ನಾಶಮಾಡಿಕೊಳ್ಳುತ್ತಾರೆ ಎನ್ನುವ ಅಂಶವನ್ನಿಟ್ಟುಕೊ0ಡು ಸಮಾಜಕ್ಕೆ ಸೂಕ್ಷ್ಮವಾಗಿಯೇ ಮನರೂಪ ಸಿನಿಮಾ ಉತ್ತಮ ಸಂದೇಶ ನೀಡಿದೆ.
ಕಿರಣ್ ಹೆಗ್ಡೆ ನಿರ್ಮಾಣ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಹಾಬಲ ಸೀತಾಳ ಬಾವಿ ಸ0ಭಾಷಣೆ ಬರೆದಿದ್ದಾರೆ.ನಿರ್ದೇಶಕ ಕಿರಣ್ ಹೆಗ್ಡೆ ಮತ್ತು ಯುವ ಲೇಖಕಿ ಶ್ವೇತಾ ನಿಹಾಲ್ ಜೈನ್ ರವರು ಚಿತ್ರ ಕತೆ ಹೆಣೆದಿದ್ದಾರೆ..
ಕಿರಣ್ ಹೆಗ್ಡೆ ಮಾತಾನಾಡಿ ಈ ಚಿತ್ರಕ್ಕೆ ನನ್ನಿ0ದಾದ ನ್ಯಾಯ ಒದಗಿಸಲು ಪ್ರಯತ್ನ್ ಪಟ್ಟಿದ್ದೇನೆ. ನ್ಯಾಷನಲ್ ಫಿಲ್ಮ್ ಪೆಡರೇಷನ್ ನಲ್ಲಿ ಈ ಸಿನೆಮಾ ಸ್ಕ್ರೀನಿಂಗ್ ಆದಾಗ ಅಂತಾರಾಷ್ಟ್ರೀಯ ಸಿನೇಮೋತ್ಸವದಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದು ಮತ್ತಷ್ಟು ಸಂಭ್ರಮ ತ0ದಿದೆ. ಎಂದರೆ
ಶ್ವೇತಾ ನಿಹಾಲ್ ಜೈನ್ ರವರು ನಿರ್ದೇಶಕ ಮತ್ತು ನಿರ್ಮಾಪಕರಾದ ಕಿರಣ್ ಸಾರ್ ಜೊತೆ ಚಿತ್ರಕತೆಯ ಬಗ್ಗೆ ಚರ್ಚಿಸುವಾಗ ಸ್ಕ್ರೀನ್ ನಲ್ಲಿ ಈ ರೀತಿ ವಿಭಿನ್ನವಾಗಿ ಮೂಡಿ ಬರುತ್ತದೆ ಎಂದ0ದುಕೊ0ಡಿರಲಿಲ್ಲ ಎಂದರು.
ದಿಲೀಪ್ ಕುಮಾರ್, ಅನುಷಾ ರಾವ್,ನಿಶಾ ಅಮೋಘ ವರ್ಷ,ಗಜ ನೀನಾಸಂ ,ಶಿವ ಕಾಗೇವಾಡ ಮಖ್ಯ ಭೂಮಿಕೆಯಲ್ಲಿದ್ದಾರೆ.