“ಹಾಯ್ ಟೈಗರ್, ಹಾಯ್ ಬಾಸ್”!!!! – ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಯಾರು?
ಜೈಲಿನಲ್ಲಿರುವ ದರ್ಶನ್ ರವರನ್ನು ಭೇಟಿ ಮಾಡಿದ ಟೈಗರ್ ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಹೇಳಿದ್ದೇನು?? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!
ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಶನಿವಾರ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಜುಲೈ 4ನೇ ತಾರೀಖಿನ ವರೆಗೆ ದರ್ಶನ್ ಹಾಗೂ ಇತರೆ 3 ಆರೋಪಿಗಳೊಂದಿಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಈ ಪ್ರಕರಣದ ಎ1 ಆರೋಪಿಯಾದ ಪವಿತ್ರ ಗೌಡ ಮತ್ತು ಇತರ 12 ಮಂದಿಯನ್ನು ಜೂನ್ 20ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಎ1 ಆರೋಪಿಯಾದ ಪವಿತ್ರ ಗೌಡರವರನ್ನು ಅವರ ಕುಟುಂಬದವರು ಅಂದರೆ ಮಗಳು ಮತ್ತು ಅವರ ತಾಯಿ ನೋಡಲು ಹೋಗಿದ್ದರು.
ಆದರೆ, ದರ್ಶನ್ ರವರ ಬಗ್ಗೆ ಕನ್ನಡ ನಟ/ನಟಿಯರು ಮಾತನಾಡುತ್ತಿಲ್ಲ. ದರ್ಶನ್ ರವರ ಬಗ್ಗೆ ಕೇಳಿದರೆ, ಬೇರೆ ಪ್ರಶ್ನೆಯನ್ನು ಕೇಳಿ ಎನ್ನುವ ಹಾಗೆ ಹೇಳುತ್ತಿದ್ದರು ಹಾಗೂ ದರ್ಶನ್ ರವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವ ಸುದ್ದಿಯೂ ಕೇಳಿಬರುತ್ತಿದೆ.
ಇದೀಗ, ದರ್ಶನ್ ರವರ ಆಪ್ತ ಹಾಗೂ ಟೈಗರ್ ಪ್ರಭಾಕರ್ ರವರ ಮಗ ವಿನೋದ್ ಪ್ರಭಾಕರ್ ರವರು ದರ್ಶನ್ ರವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದು, ವಿನೋದ್ ಪ್ರಭಾಕರ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ರವರ ಜೊತೆ ಬಹಳ ಮಾತನಾಡಲು ಆಗಲಿಲ್ಲ, ನನ್ನನ್ನು ದರ್ಶನ್ ರವರು ನೋಡಿದ ಮೇಲೆ “ಹಾಯ್ ಟೈಗರ್” ಎಂದರು, ನಾನು “ಹಾಯ್ ಬಾಸ್” ಎಂದರೆ, ದರ್ಶನ್ ರವರು ಮೌನವಾಗಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಬಗ್ಗೆ ವಿಚಾರಣೆ ನಡೆಯುತ್ತಿದ್ದರಿಂದ, ವಿಷಯ ತಿಳಿಯದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಿಲ್ಲ ಎಂದರೆ ಬಾಸ್ ಮೇಲೆ ಗೌರವ ಮತ್ತು ವಿಶ್ವಾಸ ಇಲ್ಲವೆಂದು ಅರ್ಥವಲ್ಲ. ಈ ವಿಷಯದಲ್ಲಿ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.