Cinematographer Bhuvan Gowda reboots a Royal Enfield Triumph for Yash in ‘KGF’

Published on

1052 Views

Cinematographer Bhuvan Gowda reboots a Royal Enfield Triumph for Yash in ‘KGF’

ಕೆ.ಜಿ ಎಫ್ ನಲ್ಲಿರುವ BIKE ತಯಾರಿಸಿದ್ದು ಯಾರು ಮತ್ತು ಹೇಗೆ ಗೊತ್ತಾ ..!!!!

ಸ್ಯಾಂಡಲ್‌ವುಡ್ ನಲ್ಲಿ ಈಗಾಗಲೇ ಬಹಳ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಯಶ್ ಅವರ ಪ್ರಾಜೆಕ್ಟ್ ಕೇ ಜಿ ಎಫ್ ಬಹಳ ಸದ್ದು ಮಾಡುತ್ತಿದೆ. ಒಂದದಾದ ನಂತರ ಒಂದು ಯಶಸ್ವಿ ಚಿತ್ರಗಳನ್ನು ಕೊಡುತ್ತಿರುವ ಕನ್ನಡ ಚಿತ್ರ ರಂಗದ ರಾಕಿಂಗ್ ಸ್ಟಾರ್ ಯಶ್ ಅವರ ಕೆ ಜಿ ಎಫ್ ಈಗ ಸಿಕ್ಕಾಪಟ್ಟೆ ಸದ್ದು ಆಗಿದೆ. ಇತ್ತೀಚಿಗೆ ಬಿಡುಗಡೆಯಾದ ಚಿತ್ರದ ಮೇಕಿಂಗ್ ಚಿತ್ರಗಳು ವೈರಲ್ ಆಗಿದ್ದವು.

ಜನವರಿ ಯಲ್ಲಿ ಬಿಡುಗಡೆಯಾದ ಟೀಸರ್ ಗೆ ಕೂಡ ಸಕ್ಕತ್ ರೆಸ್ಪಾನ್ಸ್ ಸಿಕ್ಕಿತ್ತು. ಟೀಸರ್ ವೀಕ್ಷಣೆಯಲ್ಲೇ ಹೊಸ ದಾಖಲೆ ಸೃಸ್ಟಿ ಮಾಡಿತ್ತು. ಇನ್ನೂ ಚಿತ್ರದಲ್ಲಿ ಯಶ್ ಕುಳಿತುಕೊಂಡಿರುವ ಬೈಕ್ ಸಿಕ್ಕಾಪಟ್ಟೆ ಹವಾ ಸೃಸ್ಟಿ ಮಾಡುತ್ತಿದೆ. ವಿನೂತನ ವಿನ್ಯಾಸದ ಈ ಬೈಕ್ ಅನ್ನು ಭುವನ ಗೌಡ ಮಾಡಿಫೈ ಮಾಡಿದ್ದಾರೆ. ಮೂಲತಹ ಇದು ರಾಯಲ್ ಎನ್‌ಫೀಲ್ಡ್ ಹಿಮಾಲಯ 500ಸೀಸೀ ಬೈಕ್ ಇದಾಗಿದ್ದು ತಮಗೆ ಬೇಕಾದ ರೀತಿಯಲ್ಲಿ ಬದಲಾವಣೆ ಮಾಡಿ ಸಿನಿಮ್ಯಾಟೋಗ್ರಫರ್ ಭುವನ ಗೌಡ ಬೈಕ್ ಗೆ ಹೊಸ ಲುಕ್ ಕೊಟ್ಟಿದ್ದಾರೆ. ಈಗ ಈ ಬೈಕ್ ಹೊಸ ಕ್ರೇಜ಼್ ಸೃಸ್ಟಿ ಮಾಡುತ್ತಿದೆ.

ಇತ್ತೀಚಿಗೆ ಭುವನ ಗೌಡ ಈ ಬೈಕ್ ಮೇಲೆ ಕುಳಿತಿರುವೆ ಚಿತ್ರವನ್ನು ತಮ್ಮ ಫೇಸ್ ಬುಕ್ ಅಲ್ಲಿ ಶೇರ್ ಮಾಡಿದ್ದರು.

ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವೆ ಸಾದ್ಯತೆ ಇದೆ. ಇನ್ನೂ ಹೊಂಬಾಳೆ ಫಿಲಂಸ್ ನಾ ವಿಜಯ್ ಕಿರಿಗೊಂದೂರು ಬಿಗ್ ಬಜ್ಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಉಗ್ರಂ ಕ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು ಚಿತ್ರ ನಾಲ್ಕು ಬಾಷೆಗಳಲ್ಲಿ ನಿರ್ಮಾಣವಾಗುತ್ತಿದೆ ಎಂದು ತಿಳಿದು ಬಂದಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com