ಟ್ರೈಲರ್ ಮೂಲಕ ಸೌಂಡ್ ಮಾಡಲು ಶುರುಮಾಡಿದ “ಚಿತ್ರಕಥಾ”

Published on

359 Views


ರಣತಂತ್ರ ನಿನ್ನ ಕಣ್ಣ ನೋಟದಲ್ಲಿ ಚಿತ್ರಗಳು ಸೇರಿದಂತೆ ಒಂದಷ್ಟು
ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿರುವ ಬಾಲಾದಿತ್ಯ
ಅವರು ಮೊದಲಬಾರಿಗೆ ನಿರ್ದೇಶನ ಮಾಡಿರುವ ಚಿತ್ರಕಥಾ ಚಿತ್ರವು
ಸದ್ದಿಲ್ಲದೇ ಶುರುವಾಗಿ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ.‌
ಈ ಚಿತ್ರದ ಟ್ರೈಲರ್ ಕಳೆದ ವಾರ ಬಿಡುಗಡೆಯಾಗಿದ್ದು ಟ್ರೈಲರ್
ನೋಡಿದವರನ್ನು ಚಿತ್ರದ ಮೇಲೆ ಕುತೂಹಲ ಹುಟ್ಟಿಸುತ್ತಿದೆ.
ಈ ಚಿತ್ರದಲ್ಲಿ ಸುಜೀತ್ ರಾಥೋಡ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.‌
ಇನ್ನುಳಿದಂತೆ ಬಿ.ಜಯಶ್ರೀ, ದಿಲೀಪ್ ರಾಜ್ ಹಾಗೂ ಸುಧಾರಾಣಿ ಪ್ರಮುಖ
ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಚೇತನ್ ಕುಮಾರ್ ಎಂಬುವವರು
ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಟ್ರೈಲರ್ ಡಿ ಬೀಟ್ಸ್ ಆಡಿಯೋ
ಚಾನಲ್ ನಲ್ಲಿ ಬಿಡುಗಡೆಯಾಗಿದ್ದು 3ಲಕ್ಷಕ್ಕೂ ಹೆಚ್ಚು ಜನರು ನೋಡಿ
ಮೆಚ್ಚಿದ್ದಾರೆ.ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಟ್ರೈಲರ್ ನೋಡಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com