ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ…

Published on

360 Views

ಬೆಂಗಳೂರು : ಕನ್ನಡ ಚಿತ್ರರಂಗದ ಹೆಸರಾಂತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ.ಅವರಿಗೆ ಕೇವಲ 39 ವರ್ಷ ವಯಸ್ಸಾಗಿತ್ತು. ಅತಿ ಚಿಕ್ಕವಯಸ್ಸಿನಲ್ಲೇ ಚಿರಂಜೀವಿ ಸರ್ಜಾ ನಿಧನರಾಗಿರುವುದು ಇಡೀ ಕನ್ನಡ ಚಿತ್ರರಂಗಕ್ಕೇ ಆಘಾತವಾಗಿದೆ ತಿಳಿದು ಬಂದಿದೆ.

ಕಳೆದ ಎರಡು ಮೂರು ದಿನಗಳ ಹಿಂದೆ ಕೊಂಚ ಅನಾರೋಗ್ಯಕ್ಕೀಡಾದ ಹಿನ್ನಲೆಯಲ್ಲಿ ಚಿರಂಜೀವಿ ಅವರನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಉಸಿರಾಟದ ತೊಂದರೆ ಅವರಲ್ಲಿ ಕಾಣಿಸಿಕೊಂಡಿತ್ತು.ಕೆಲ ಸಮಯದಲ್ಲೇ ಲಘು ಹೃದಯಾಘಾತಕ್ಕೂಳಗಾಗಿದ್ದರು, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ

ಸುಮಾರು 22 ಚಿತ್ರಗಳಲ್ಲಿ ಅಭಿನಯಿಸಿದ್ದ ಚಿರಂಜೀವಿ ಅಭಿಮಾನಿಗಳ ಮನೆಮಾತಾಗಿದ್ದರು. ಚಿರಂಜೀವಿ ಸರ್ಜಾ ಖ್ಯಾತ ನಟಿ ಪತ್ನಿ ಮೇಘನಾ ರಾಜ್ ಅವರನ್ನು ಅಗಲಿದ್ದಾರೆ.

ವಾಯುಪುತ್ರ, ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಶಲ್, ಚಂದ್ರಲೇಖ, ಅಜಿತ್, ರುದ್ರತಾಂಡವ, ಆಟಗಾರ, ರಾಮ್ಲೀಲಾ, ಆಕೆ, ಭರ್ಜರಿ, ಪ್ರೇಮ ಬರಹ, ಸಂಹಾರ, ಅಮ್ಮ ಐ ಲವ್ ಯೂ, ಸಿಂಗ, ಖಾಕಿ, ಆದ್ಯಾ, ಶಿವಾರ್ಜುನ, ರಾಜಮಾರ್ತಾಂಡ, ಏಪ್ರಿಲ್, ರಣಂ, ಕ್ಷತ್ರಿಯಾ ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ. 2018ರಲ್ಲಿ ನಟಿ ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಈಗ ಚಿರಂಜೀವಿ ಸರ್ಜಾ ಅವರ ಸಾವು ಅಭಿಮಾನಿಗಳಿಗೆ ಬಹಳ‌ ಆಘಾತವನ್ನು ಉಂಟುಮಾಡಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com