ಶುಕ್ರವಾರ ಬರುತ್ತಿದ್ದಾಳೆ `ಚಿನ್ನದ ಗೊಂಬೆ’

Published on

1127 Views

ಶ್ರೀ ಕೃಷ್ಣ ಹಾಗೂ ಮನುಶ್ರೀ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಕೃಷ್ಣಪ್ಪ ಕನಕಪುರ ನಿರ್ಮಾಣದ, ಟಿ ಗೋಪಾಲನ್ ಸಹ ನಿರ್ಮಾಪಕರಾಗಿರುವ `ಚಿನ್ನದ ಗೊಂಬೆ’ ಈ ವಾರ ಬಿಡುಗಡೆ ಆಗುತ್ತಿದೆ.
ಇದೊಂದು ಹಾರರ್ ಹಾಗೂ ಥ್ರ್ರಿಲ್ ಇರುವ ಚಿತ್ರ. ನಾಯಕನನ್ನು ಕಂಟ್ರೋಲ್ ಮಾಡುವ ಒಂದು ಪಾತ್ರವಿದೆ. ಅದೇ ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆಯಂತೆ. ಪಂಕಜ್ ಬಾಲನ್ ಈ ಚಿತ್ರದ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಕೀರ್ತಿ ಕೃಷ್ಣ ಈ ಸಿನಿಮಾ ಇಂದ ನಾಯಕ ಪಟ್ಟ ಏರುತ್ತಿದ್ದಾರೆ. ಇಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಲೀನ ಖುಷಿ ಕಥಾ ನಾಯಕಿ, ಅಂಜುಶ್ರೀ ಮತ್ತೊಬ್ಬ ನಾಯಕಿಯಾಗಿದ್ದಾರೆ.
ಧನಶೀಲನ್ ಸಂಗೀತ, ವೆಂಕಿ ಧರ್ಷನ್ ಛಾಯಾಗ್ರಹಣ, ಕೆ. ಬಾಲು ಸಾಹಸ, ಗುರು ಪ್ರಸಾದ್ ಸಂಕಲನ, ಬಹದ್ದೂರ್ ಚೇತನ್ ಕುಮಾರ್ ಗೀತ ಸಾಹಿತ್ಯ, ಕೌಶಲ್ಯ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com