ಕಸ್ತೂರಿ ನಿವಾಸದಲ್ಲಿ ಚಂದ್ರಯಾನ ಸೋಮವಾರದಿಂದ ಶುಕ್ರವಾರ ಸಂಜೆ ೭ ಕ್ಕೆ
ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕ ರ‍್ಗವನ್ನ ರಂಜಿಸುತ್ತಾ ಬಂದಿರುವ ಉದಯ ಟಿವಿಯಲ್ಲಿ ಸಂಜೆ ೭ಕ್ಕೆ ಪ್ರಸಾರವಾಗುತ್ತಿರುವ ಧಾರಾವಾಹಿ ಕಸ್ತೂರಿ ನಿವಾಸ.ಈ ಧಾರಾವಾಹಿ ಸಂಬಂಧಳ ಮೌಲ್ಯಗಳನ್ನ ಸಾರುತ್ತಾ , ಒಟ್ಟು ಕುಟುಂಬದ ಆನಂದವನ್ನ ತೋರಿಸುತ್ತಾ ಬಂದಿದೆ.
೨೫೦ ಕಂತುಗಳನ್ನ ಮುಗಿಸಿ, ಹೊಸ ಹೊ್ಸ ತಿರುವುಗಳೊಂದಿಗೆ ಮುನ್ನುಗುತ್ತಿದೆ ಈ ಧಾರಾವಾಹಿ. ಅತ್ತೆ ಸೊಸೆ ಬಾಂಧವ್ಯ, ಅಮ್ಮ ಮಗಳ ಕರುಳಿನ ನಂಟು, ತಾಯಿ ಮಗನ ವಾತ್ಸಲ್ಯ ಮನೆಯಲ್ಲಿರೊ ಒಗ್ಗಟ್ಟು ಹೀಗೆ ಎಲ್ಲಾ ಮೌಲ್ಯಗಳನ್ನ ಈ ಧಾರಾವಾಹಿ ವಿಶ್ಲೇಷಿಸುತ್ತಾ ಬಂದಿದೆ. ಈಗ ಕಥೆಯಲ್ಲಿ ಮತ್ತೊಂದು ಕುತೂಹಲ ಹುಟ್ಟಿಸುವಂತ ಪಾತ್ರದ ಪ್ರವೇಶವಾಗುತ್ತಿದೆ. ವಸಿಷ್ಥ ಅನ್ನೋ ಪಾತ್ರದ ಮುಖಾಂತರ ಕಸ್ತೂರಿ ನಿವಾಸದ ಕುಟುಂಬಕ್ಕೆ ಸರ‍್ಪಡೆಯಾಗುತ್ತಿದ್ದಾರೆ ನಟ ಚಂದ್ರು. ಅತ್ತೆ ಸೊಸೆ ಒಂದಾದ್ರು , ಮೃದುಲಾ ರಾಘವ ಪ್ರೀತಿಯಲ್ಲಿ ಜೊತೆಯಾದ್ರು , ಈ ಖುಷಿಗಳ ನಡುವೆ ಮಾಧುರಿ ಮಗಳು ಮೃದುಲಾನೇ ಅನ್ನುವ ಸತ್ಯ ಗೊತ್ತಾಗೋ ಹಂತದಲ್ಲಿ ಕಥೆಗೆ ಟ್ವಿಸ್ಟ್ ಕೊಡೋಕೆ ವಸಿಷ್ಥ ಕತೆಯಲ್ಲಿ ಕಾಲಿಟ್ಟಿದ್ದಾನೆ.
ಈ ಪಾತ್ರದ ಮುಖಾಂತರ ಮರಳಿ ಕಿರುತೆರೆಗೆ ಬಂದಿರೋ ಖುಷಿಯಿದೆ, ವಸಿಷ್ಥ ಪಾತ್ರ ಬಹಳ ತ್ರಿಲ್ಲಿಂಗ್ ಇದೆ, ಅವನಿಂದ ಏನು ಬದಲಾವಣೆಗಳು ಆಗಲಿದೆ ಅನ್ನೋದಕ್ಕೆ ಕಸ್ತೂರಿ ನಿವಾಸ ಧಾರಾವಾಹಿಯ ಕಂತುಗಳು ಉತ್ತರಿಸಲಿದೆ ‘’ ಅಂತ ಖುಷಿ ಹಂಚಿಕೊಂಡಿದ್ದಾರೆ ಚಂದ್ರು.
ತಾಯಿ ಮಗಳು ಸೇರುತ್ತಾರಾ? ರಾಘವ್ ಮೃದುಲಾ ಬದುಕಲ್ಲಿ ಬಂದಿರೋ ಬಿರುಗಾಳಿ ಮುಂದೆ ಅವರನ್ನ ಎಲ್ಲಿ ಸೇರಿಸುತ್ತೆ ? ಎಂಬ ಕುತೂಹಲಗಳೊಂದಿಗೆ ಸಂಚಿಕೆಗಳು ಪ್ರಸಾರವಾಗಲಿವೆ ಕಸ್ತೂರಿ ನಿವಾಸದಲ್ಲಿ.
“ಕಸ್ತೂರಿ ನಿವಾಸ” ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ ೭ಕ್ಕೆ ಪ್ರಸಾರವಾಗುತ್ತದೆ.