ಶ್ರೀಕೃಷ್ಣ@gmail.com ಚಿತ್ರದಲ್ಲಿ ಚಂದನ್…!!

Published on

372 Views

ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದ ಚಂದನ್ ಲವ್ ಯೂ ಅಲಿಯಾ ಮತ್ತು ಪ್ರೇಮ ಬರಹ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು. ಈಗ‌ ನಾಗಶೇಖರ್ ನಿರ್ದೇಶನದ ಸಂದೇಶ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಮತ್ತು ಮಲಯಾಳಂ ನಲ್ಲಿ ತೆರೆ ಕಾಣುತ್ತಿರುವ ಶ್ರೀಕೃಷ್ಣ@gmail.com ಸಿನಿಮಾದಲ್ಲಿ ಚಂದನ್ ಕುಮಾರ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ತಮ್ಮ ಭಾಗದ ಶೂಟಿಂಗ್ ಮುಗಿಸಿರುವುದಾಗಿ ಚಂದನ್ ತಿಳಿಸಿದ್ದು, ಯಾವ ಪಾತ್ರ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಡಾರ್ಲಿಂಗ್ ಕೃಷ್ಣ ನಾಯಕನಾಗಿರುವ ಶ್ರೀಕೃಷ@gmail.com ಸಿನಿಮಾದಲ್ಲಿ ಭಾವನಾ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನ ಪಾತ್ರದಲ್ಲಿ ದತ್ತಣ್ಣ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಶೇ.70 ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, ನವೆಂಬರ್ ತಿಂಗಳಲ್ಲಿ ಮತ್ತೆ ಶೂಟಿಂಗ್ ಆರಂಭಿಸಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com