ಚಂದನವನದ ತಾರೆಯರ ಕ್ಯಾಲೆಂಡರ್

Published on

538 Views

ಹಾಲಿವುಡ್, ಬಾಲಿವುಡ್‍ದಲ್ಲಿ ಕಲಾವಿದರ ಕ್ಯಾಲೆಂಡರ್‍ಗಳು ಬರುತ್ತಿದೆ. ಅದೇ ರೀತಿಯಲ್ಲಿ ಸ್ಯಾಂಡಲ್‍ವುಡ್‍ನ 12 ನಟಿಯರ ವಿವಿಧ ಭಂಗಿಗಳ ಭಾವಚಿತ್ರ ಇರುವ ಕ್ಯಾಲೆಂಡರ್ ಛಾಯಗ್ರಾಹಕ ಲೋಹಿತ್‍ರಾಜ್ ಸಾರಥ್ಯದಲ್ಲಿ ಎರಡನೆ ಬಾರಿ ಮಾರುಕಟ್ಟೆಗೆ ಬಂದಿದೆ. ಅವರು ಹೇಳುವಂತೆ ಕಲಾವಿದರ ಡೇಟ್ಸ್ ಹೊಂದಾಣಿಕೆ, ಗುಣಮಟ್ಟ, ಪೂರ್ವಭಾವಿ ಕೆಲಸಗಳಿಗೆ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ತಡವಾಗಿದೆ. ಪ್ರತಿ ಫೋಟೋ ಶೂಟ್‍ನ್ನು ಕನಿಷ್ಟ ನಾಲ್ಕು ಗಂಟೆಗಳಲ್ಲಿ ಮುಗಿಸಲಾಗಿದೆ. ಜೂನ್ 2018 ರಿಂದ ಮೇ 2019ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂಬುದರ ಮಾಹಿತಿ ನೀಡಿದರು. ಶುಭಾಪೂಂಜಾ, ರಾಗಿಣಿದ್ವಿವೇದಿ, ಭಾವನಾರಾವ್, ರಾಧಿಕಾಚೇತನ್, ನಿಖಿತಾನಾರಾಯಣ್, ಸಂಚಿತಾಪಡುಕೋಣೆ, ಸಂಗೀತಾಭಟ್, ಶ್ರಾವ್ಯ, ಆಕಾಂಕ್ಷü, ಸುಶ್ಮಿತಾಜೋಷಿ, ಕೀರ್ತಿಲಕ್ಷೀ ಮತ್ತು ಸುಕೃತಾದೇಶಪಾಂಡೆ ಪ್ರತಿ ತಿಂಗಳ ಪುಟದಲ್ಲಿ ರಾರಾಜಿಸಿದ್ದಾರೆ.

ಕ್ಯಾಲೆಂಡರ್ ಬಿಡುಗಡೆ ಮಾಡಿದ ಶರಣ್ ಮಾತನಾಡಿ ಚಿತ್ರದಲ್ಲಿ ಇಬ್ಬರು ನಾಯಕಿಯನ್ನು ಸಂಭಾಳಿಸುವುದು ಕಷ್ಟವಾಗಿರುತ್ತದೆ. ಅಂತಹುದರಲ್ಲಿ ಲೋಹಿತ್‍ರಾಜ್ ಬರೋಬ್ಬರಿ 12 ನಟಿಯರ ಸಮಯ ಹೊಂದಿಸಿಕೊಂಡು ಫೋಟೋಶೂಟ್ ಮಾಡಿರುವುದು ಸಾಮಾನ್ಯದ ಮಾತಲ್ಲ. ಕ್ಯಾಲೆಂಡರ್ ನೋಡಿದಾಗ ಗುಣಮಟ್ಟ ಏನೆಂದು ತಿಳಿಯುತ್ತದೆ. ಇವರ ಶ್ರಮ ಹಾಗೂ ಸುಂದರ ಮನಸ್ಸಿನಿಂದ ಶುರುಮಾಡಿರುವುದು ಮನಮೋಹಕವಾಗಿ ಬಂದಿದೆ. ಹಾಲಿವುಡ್, ಬಾಲಿವುಡ್‍ನಲ್ಲಿ ಇಂತಹ ಸಂಸ್ಕ್ರತಿ ಬಂದಿದ್ದು ನಮ್ಮಲ್ಲಿ ಯಾಕೆ ಇಲ್ಲವೆಂಬ ಪ್ರಶ್ನೆ ಇತ್ತು. ಅದನ್ನು ಲೋಹಿತ್ ಹೋಗಲಾಡಿಸಿದ್ದಾರೆ. ರ್ಯಾಂಬೋ-2 ಎಲ್ಲಾ ಕಡೆ ಉತ್ತಮ ಪ್ರದರ್ಶನಗೊಳ್ಳುತ್ತಿದ್ದು, ಈ ಮೂಲಕ ಚಿತ್ರ ನೋಡಿದವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ನಮ್ಮ ಬ್ಯಾನರ್‍ನಿಂದ ಬಿಡುಗಡೆಗೊಂಡ 2ನೇ ಚಿತ್ರಕ್ಕೆ ಮತ್ತೋಮ್ಮೆ ಒಳ್ಳೆ ವೇದಿಕೆ ಸಿಕ್ಕಿದೆ ಎಂದರು.

12 ನಟಿಮಣಿಯರ ಪರಿಕಲ್ಪನೆಯನ್ನು ಚೆನ್ನಾಗಿ ತೋರಿಸಲಾಗಿದ್ದು, ಯಾವುದನ್ನು ನಕಲು ಮಾಡದೆ ಪ್ರತ್ಯೇಕ ಭಂಗಿ, ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಿರುವುದು ನವನೀತದಂತೆ ಕಾಣಿಸುತ್ತದೆ. ಎಲ್ಲರನ್ನು ಜಾಣ್ಮೆಯಿಂದ ಮನದಟ್ಟು ಮಾಡಿಸಿ ಕೆಲಸ ತೆಗೆದುಕೊಂಡು, ಫೋಟೋಗೆ ನ್ಯಾಯ ತುಂಬಿದ್ದಾರೆ. ಇದರಿಂದ ಬೇರೆಯವರೆಗೆ ಮತ್ತಷ್ಟು ಈವೆಂಟ್ಸ್ ಮಾಡಲು ಅನುಕೂಲವಾಗುತ್ತದೆಂದು ಅಭಿಪ್ರಾಯಪಟ್ಟರು ನಿರ್ದೇಶಕ ತರುಣ್‍ಸುದೀರ್. ಕಾರ್ಯಕ್ರಮದಲ್ಲಿ ನಿಖಿತಾನಾರಾಯಣ್, ಸಂಚಿತಾಪಡುಕೋಣೆ, ಸುಕೃತಾದೇಶಪಾಂಡೆ, ಕೀರ್ತಿಲಕ್ಷೀ, ಭಾವನಾರಾವ್ ಹಾಗೂ ಸುಶ್ಮಿತಾಜೋಷಿ ಹಾಜರಿದ್ದು ಖುಷಿಯನ್ನು ಹಂಚಿಕೊಂಡರು

Copyright ©2026 . All Rights Reserved. privacy | terms Whatsapp: 9538193653 Email: hello@flixoye.com