ನಿರೂಪಕ ಚಂದನ್ ಅಗಲುವಿಕೆ; ಪುತ್ರನನ್ನು ಕೊಂದು ಪತ್ನಿ ಆತ್ಮಹತ್ಯೆಗೆ ಯತ್ನ

Published on

270 Views

ನಟ, ಕಿರುತೆರೆ ನಿರೂಪಕ ಚಂದನ್ ಸಾವಿನಿಂದ ಮನನೊಂದಿದ್ದ ಚಂದನ್ ಪತ್ನಿ ಮೀನಾ (38) ತನ್ನ ಮಗನ ಕತ್ತು ಕೊಯ್ದು ಪುತ್ರನನ್ನು ಹತ್ಯೆಗೈದು ಬಳಿಕ ತಾನು ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. 13ವರ್ಷದ ಪುತ್ರ ಸಾವನ್ನಪ್ಪಿದ್ದು, ಮೀನಾ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಮೀನಾ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೇ 24 ರಂದು ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಗೆ ತೆರಳುತ್ತಿದ್ದಾಗ ದಾವಣಗೆರೆ ಸಮೀಪದ ಹನಗವಾಡಿ ಗ್ರಾಮದ ಹೆದ್ದಾರಿ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಚಂದನ್ ರವರ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಚಂದನ್ ಸಾವನ್ನಪ್ಪಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com