50ನೇ ವರ್ಷಾಚರಣೆಯ ಸಂಭ್ರಮದಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ

Published on

568 Views

“ಕನ್ನಡ ಚಿತ್ರರಂಗದ ನಂಟಿನೊಂದಿಗೆ 50 ವಸಂತಗಳನ್ನು ಕಳೆದ ಚಾಮುಂಡೇಶ್ವರಿ ಸ್ಟುಡಿಯೊ”
ಚಾಮುಂಡೇಶ್ವರಿ ಸ್ಟುಡಿಯೋ ಕಳೆದ 50 ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇದೀಗ ಇದೇ ಸ್ಟುಡಿಯೋ 5 ದಶಕ ಪೂರೈಸಿದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋಸ್ ಮತ್ತು ಸಿನಿಘಮಾ ಸಂಸ್ಥೆಯ ಸಮಾಗಮದಲ್ಲಿ “ಪ್ರತಿಭಾ ಸಂಪದ” ಮೂಲಕ ಸಿನಿಮಾಕ್ಷೇತ್ರಕ್ಕೆ ಹೊಸದಾಗಿ
ಪ್ರವೇಶ ಬಯಸುವವರಿಗೆ ಬೃಹತ್ ವೇದಿಕೆ ಸೃಷ್ಟಿಸಲು ಮುಂದಾಗಿದ್ದಾರೆ.

ChamundeshwariStudio

ಸಿನಿಘಮಾ ಸಂಸ್ಥೆಯು 100 ಕಿರುಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಇಲ್ಲಿನ ಹೊಸ ಪ್ರತಿಭೆಗಳನ್ನು ಬಳಸಿಕೊಂಡು ಆನಂತರದ ದಿನಗಳಲ್ಲಿ 10 ಸಿನಿಮಾ ಮಾಡಲು ಯೋಜಿಸಿದೆ. ಈ ಯೋಜನೆಗೆ ಯಶಸ್ವಿ 50ನೇ ವರ್ಷಾಚರಣೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋ ಸಕಲ ರೀತಿಯಲ್ಲಿ ನೆರವು ನೀಡಲು ಕೈ ಜೋಡಿಸಿದೆ ಎಂದು ಸಿನಿಘಮದ ಮುಖ್ಯಸ್ಥ ಎಂ.ಎಲ್ ಪ್ರಸನ್ನ ತಿಳಿಸಿದರು.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ 100 ಕಿರುಚಿತ್ರಗಳಲ್ಲಿ 10 ಕಿರುಚಿತ್ರಗಳನ್ನು ಕನ್ನಡದ ಹೆಸರಾಂತ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಆ ಮೂಲಕ ಹೊಸಬರಿಗೆ ಗುಣಮಟ್ಟವನ್ನು ಉಳಿದ 90 ಕಿರುಚಿತ್ರಗಳನ್ನು ನಿರ್ಮಿಸಲು 45 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಂಡಕ್ಕೆ 2 ಕಿರುಚಿತ್ರದ ಜವಾಬ್ದಾರಿ ನೀಡಲಾಗುತ್ತದೆ. ಅದರಲ್ಲೊಂದು ಮನರಂಜನಿಯವಾದರೆ, ಇನ್ನೊಂದು ಮನಮುಟ್ಟುವಂಥ ಪ್ರೀತಿ, ಸಹನೆ, ಸಾಮಾಜಿಕ ತಲ್ಲಣದಂಥ ಕತೆಯನ್ನು ಆಯ್ದುಕೊಳ್ಳಬೇಕು. 100 ಕಿರುಚಿತ್ರಗಳಲ್ಲಿ ಆಯ್ದ 60 ಕಿರುಚಿತ್ರೋತ್ಸವ ಜುಲೈ ಕೊನೇ ವಾರದಲ್ಲಿ 6 ದಿನಗಳ ಕಾಲ ಪ್ರದರ್ಶಿಸಲಾಗುವುದು. ಚಿತ್ರರಂಗದ ಗಣ್ಯರು ಇದರಲ್ಲಿ ಭಾಗವಹಿಸಿಲಿದ್ದಾರೆ. ಕೊನೇ ಏಳನೆ ದಿನದ ಸಮಾರೋಪ ಸಮಾರಂಭದಲ್ಲಿ ಆಯ್ದ 10 ತಂಡಗಳಿಗೆ ಚಲನಚಿತ್ರವನ್ನು ನಿರ್ಮಾಣದ ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಸಿನಿಘಮಾದ ಜಾಲತಾಣದಲ್ಲಿ ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬಹುದು.


ಚಾಮುಂಡೇಶ್ವರಿ ಸ್ಟುಡಿಯೋದ ಮುಖ್ಯಸ್ಥ ಶಡಗೋಪನ್, ಸಿನಿಘಮಾದ ವೆಂಕಟ್ ಗೌಡ, ನಿರಗದೇಶಕ ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com