ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಚಿತ್ರಕ್ಕೆ ಅಂತಿಮವಾಗಿ ಟೈಟಲ್ ಫಿಕ್ಸ್

Published on

312 Views

ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ಚೌಕ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಬರ್ಟ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆದ್ದಿದ್ದರು. ಆ ಚಿತ್ರದ ಯಶಸ್ಸಿನ ನಂತರ ತರುಣ್ ಸುಧೀರ್ ನಿರ್ದೇಶನದ
ಮುಂದಿನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಾಗಿ ನಟಿಸಲಿದ್ದು, ಚಿತ್ರಕ್ಕೆ ರಾಬರ್ಟ್ ಎಂಬ ಶೀರ್ಷಿಕೆಯನ್ನೇ ಅಂತಿಮವಾಗಿ ಇಡಲು ನಿರ್ಧರಿಸಿದ್ದಾರೆ.

ದರ್ಶನ್​ ಬಾಲಕನೊಬ್ಬನ ಕೈ ಹಿಡಿದುಕೊಂಡಿದ್ದ ಪೋಸ್ಟರ್ ದೀಪಾವಳಿ ಹಬ್ಬದಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇಂದು ಈ ಚಿತ್ರದ ಅಧಿಕೃತ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ನೀಡಿದೆ. 2019ರಲ್ಲಿ ಈ ಚಿತ್ರ ಸೆಟ್ಟೇರಲಿದೆ ಎಂದು ನಟ ದರ್ಶನ್​ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಇಂದು ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಹನುಮಂತನ ಮೇಲೆ ರಾಮ ಕೂತು ಬಾಣ ಬಿಡುತ್ತಿರುವ ಚಿತ್ರ ಬಳಸಿದ್ದು ಚಿತ್ರದ ಮೇಲೆ ಕುತೂಹಲ ಹುಟ್ಟಿಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com