ಚಕ್ರವರ್ತಿ ಚಂದ್ರಚೂಡ್ ನಟನೆಯ ‘ಮಧ್ಯಂತರ’ ಟೈಟಲ್ ಫಸ್ಟ್ ಲುಕ್ ಲಾಂಚ್ ಮಾಡಿದ ಕಿಚ್ಚ

Published on

550 Views

ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಆಕ್ಟಿವ್ ಆಗಿರೋ ನಟ,ನಿರ್ದೇಶಕ ಹಾಗೂ ಖ್ಯಾತ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಈಗ ‘ಮಧ್ಯಂತರ’ ಸಿನಿಮಾಗೆ ಸೈನ್ ಮಾಡಿದ್ದಾರೆ. ‘ಮಧ್ಯಂತರ’ ಸಿನಿಮಾದ ಫಸ್ಟ್ ಲುಕನ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಲೀಸ್ ಮಾಡಿ ಚಕ್ರವರ್ತಿ ಚಂದ್ರಚೂಡ್ ಹಾಗೂ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಚಿತ್ರಕ್ಕೆ ವಸಿಷ್ಠ ಆಕ್ಷನ್-ಕಟ್ ಹೇಳಿದ್ದು, ಕಮಲ್ ಜೋಷಿ ಬಂಡವಾಳ ಹೂಡಿದ್ದಾರೆ. ಒಂದು ವಿಭಿನ್ನ ರೂಪದಲ್ಲಿ ಹಾಜರಾಗಿರೋ ಚಕ್ರವರ್ತಿ ಚಂದ್ರಚೂಡ್ ‘ಮಧ್ಯಂತರ’ ಚಿತ್ರದ ಮೂಲಕ ಒಂದೊಳ್ಳೆ ಸಿನಿಮಾ ಕೊಡುವ ವಿಶ್ವಾಸದಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com