ಹಸಿದ ಹೊಟ್ಟೆಗೆ ಆಸರೆಯಾದ ಚಡಚಣ ಹುಡುಗರು ಟೀಮ್..

Published on

495 Views

ಹಸಿದವನಿಗೆ ಗೊತ್ತು ಅನ್ನದ ಮೌಲ್ಯ. ಇದನ್ನು ಅರಿತ ಟೀಮ್ ಚಡಚಣ ಹುಡುಗರು ಹಸಿದವರಿಗೆ ಅನ್ನ ನೀಡುವ ಕಾಯಕಕ್ಕೆ ಮುಂದಾಗಿದ್ದು, ಬರೋಬರಿ 735ಕ್ಕೂ ಹೆಚ್ಚು ಕಿಟ್ ಗಳನ್ನೂ ನೀಡಿದ್ದಾರೆ.

ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ಈ ತಂಡಕ್ಕೆ ಸೋಷಿಯಲ್ ಮೀಡಿಯಾ ಮಂದಿ ಸಾಥ್ ನೀಡಿದ್ದು, 3 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದಾರೆ. ಈ ಬಂದಿರೋ ಹಣ ಒಂದು ರೂಪಾಯಿ ಸಹ ತಪ್ಪು ಬಳಕೆಯಾಗದ ರೀತಿಯಲ್ಲಿ, ಉತ್ತಮ ಕಾಯಕಕ್ಕೆ ಮಾತ್ರ ಬಳಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಕೆಲವು ದಿನ ಒಂದಿಷ್ಟೂ ಹಳ್ಳಿಗಳಿಗೆ ಹೋಗಿ ಅಲ್ಲಿನ ಬಡ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಾಗೇನೇ ಬೆಂಗಳೂರಿನ ಕೆಲವು ಕುಟುಂಬಗಳಿಗೂ ಸಹ ನಿರ್ದೇಶಕ, ನಟ ಪವನ್ ಕುಮಾರ್ ಅವರ ಸಹಕಾರದಿಂದ ಫುಡ್ ಕಿಟ್ ತಲುಪಿಸಿದ್ದಾರೆ. ಇವರ ಈ ಶ್ರಮದ, ಹೆಮ್ಮೆಯ ಕೆಲಸಕ್ಕೆ ನಮ್ ಕಡೆಯಿಂದ ಶುಭಕಾಮನೆಗಳು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com