ಸೆನ್ಸಾರ್ ‌ಮಂಡಳಿಯಿಂದ‌ ಯು/ಎ ಸರ್ಟಿಫಿಕೇಟ್ ‌ಪಡೆದ ‘ಗಡಿಯಾರ’…!!

Published on

440 Views

ಸ್ಯಾಂಡಲ್ ವುಡ್ ನ ವಿಭಿನ್ನ‌ ಹಾಗೂ ನಿರೀಕ್ಷಿತ ಸಿನಿಮಾಗಳ‌ ಸಾಲಿನಲ್ಲಿರುವ ಚಿತ್ರ ‘ಗಡಿಯಾರ’. ಈ ಚಿತ್ರದ ಶೂಟಿಂಗ್ ‌ಪೂರ್ಣಗೊಂಡಿದ್ದು, ಪಕ್ಕಾ‌ ಕಮರ್ಷಿಯಲ್ ‌ಚಿತ್ರ ಇದಾಗಿದೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ‌ ರಾಜ್ ದೀಪಕ್‌ಶೆಟ್ಟಿ, ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ ಕಾಣಿಸಿಕೊಂಡಿದ್ದಾರೆ.

‘ಗಡಿಯಾರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ದೊರಕಿದ್ದು, ಚಿತ್ರತಂಡ ಚಿತ್ರ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಪೋಸ್ಟರ್ ಹಾಗೂ ಟೈಟಲ್ ನಿಂದ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದ ‘ಗಡಿಯಾರ’ ಪ್ರೇಕ್ಷಕರನ್ನು ಕಾತುರದಿಂದ ಕಾಯುವಂತೆ ಮಾಡಿದೆ. ಇದರ ಜೊತೆ ಚಿತ್ರವು ಹಿಂದಿ, ತಮಿಳು, ತೆಲುಗು, ಮಳಯಾಲಂಗೂ ಡಬ್ಬಿಂಗ್ ರೈಟ್ಸ್ ಬಂದಿದ್ದು ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ ನಿರ್ಮಾಪಕರು.

ಈ ಚಿತ್ರಕ್ಕೆ ಕರಾವಳಿ ಮೂಲದ ಪ್ರಬಿಕ್ ಮೊಗವೀರ್ ರವರು ಕಥೆ- ಚಿತ್ರಕಥೆ- ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ಬಂಡವಾಳವನ್ನು ಹೂಡಿದ್ದಾರೆ. ದೀಪಿಕಾ ವಿನಯ್ ಕುಮಾರ್ ರಾವ್ ಹಾಗೂ ಲಾವಣ್ಯ ‌ಲೀಲಾಮೋಹನ ಅವರ ಸಹಕಾರದೊಂದಿಗೆ ಆತ್ಮ ಸಿನಿಮಾಸ್ ಸಂಸ್ಥೆಯಲ್ಲಿ ಈ ಚಿತ್ರವನ್ನು‌ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದ ಅತಿಥಿ ಪಾತ್ರದಲ್ಲಿ ಮಾಜಿ ಪೊಲೀಸ್ ಕಮೀಷನರ್ ಸಾಂಗ್ಲಿಯಾನ, ಮಳಯಾಲಂ ನಟ ರಿಹಾಜ್ ಎಮ್ ಟಿ ಮತ್ತು ಬಾಲಿವುಡ್ ನಟ ಗೌರಿ ಶಂಕರ್ ಅವರು ನಟಿಸಿದ್ದಾರೆ. ಕರಾವಳಿ ಬೆಡಗಿ ಯಜ್ಞ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಅನ್ನು ಬಿ.ಎಸ್ ಯಡಿಯೂರಪ್ಪ ನವರು ರಿಲೀಸ್ ಮಾಡಿದ್ದು, ಚಿತ್ರದ ಪೋಸ್ಟರ್ ನ್ನು ಸಚಿವ ವಿ.ಸೋಮಣ್ಣ ರವರು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com