ದಿಗಂತ್-ಐಂದ್ರಿತಾ ರೇ ದಂಪತಿಗೆ ಸಿಸಿಬಿ ನೋಟೀಸ್

Published on

376 Views

ಸ್ಯಾಂಡಲ್ವುಡ್ ಡ್ರಗ್ ಮಾಫಿಯಾದಲ್ಲಿ ಈಗಾಗಲೇ ನಟಿ ರಾಗಿಣಿ ಜೈಲು ಸೇರಿದ್ದು, ನಟಿ ಸಂಜನಾ ಸಿಸಿಬಿ ಕಸ್ಟಡಿಯಲ್ಲಿ ಇದ್ದಾರೆ. ಸಾಕಷ್ಟು ಕಿರುತೆರೆ-ಹಿರಿತೆರೆ ನಟ-ನಟಿಯರ ಹೆಸರು ಈಗಾಗಲೇ ತಳಕು ಹಾಕಿಕೊಂಡಿದ್ದು, ಐಂದ್ರಿತಾ ರೇ- ದಿಗಂತ್ ದಂಪತಿಗೆ ಸಿಸಿಬಿ ನೋಟೀಸ್ ಕಳಿಸಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಹೇಳಿದೆ. ಐಂದ್ರಿತಾ ರೇ ರವರ ಪೋಟೋಗಳು ಡ್ರಗ್ ಪೆಡ್ಲರ್ ರಾಗಿರುವ ರಾಹುಲ್, ಪಾಝೇಲ್ ಜೊತೆ ಕಾಣಿಸಿಕೊಂಡಿದ್ದು, ಐಂದ್ರಿತಾ ರೇ ರವರು ನಾನು ಮೂವೀ ಪ್ರೊಮೋಷನ್ ಗೆ ಹೋಗಿದ್ದು, ನನಗೆ ಅವರದು ಅಷ್ಟು ಪರಿಚಯವಿಲ್ಲವೆಂದು ಹೇಳಿದ್ದಾರೆ.

ಸಿಸಿಬಿಯವರು ಕರೆದರೆ ಹೋಗುತ್ತೇನೆ ಎಂದು ಹೇಳಿದ್ದ ಐಂದ್ರಿತಾಗೆ ಈಗ ಸಿಸಿಬಿ ನೋಟೀಸ್ ಕೊಟ್ಟಿದ್ದೆ. ಇನ್ನು ಈ ದಂಪತಿಗಳ ವಿಚಾರಣೆಯ ವೇಳೆ ಇನ್ನು ಯಾರ ಹೆಸರು ಹೊರಬಿಳಲಿದೆಯೋ ನೋಡಬೇಕಷ್ಟೇ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com