ಅಕುಲ್ ಬಾಲಾಜಿ ಹಾಗೂ ನಟ ಸಂತೋಷ್ ಕುಮಾರ್ ಗೆ ಸಿಸಿಬಿ ನೋಟೀಸ್….

Published on

360 Views

ಸ್ಯಾಂಡಲ್ವುಡ್ ಡ್ರಗ್ ಮಾಫಿಯಾದಲ್ಲಿ ದಿನಕ್ಕೊಂದು ಹೆಸರು ಕೇಳಿಬರುತ್ತಿದ್ದು, ರಾಗಿಣಿ ಮತ್ತು ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲು ಊಟ ಮಾಡುತ್ತಿದ್ದಾರೆ. ಅದರ ಬೆನ್ನಲೇ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿಯ ವಿಚಾರಣೆಯನ್ನು ಮಾಡಿ ಕಳುಹಿಸಿದ ಸಿಸಿಬಿ ಇದೀಗ ಖ್ಯಾತ ನಿರೂಪಕ ಅಕುಲ್ ಬಾಲಾಜಿಗೆ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧ ಪಟ್ಟಂತೆ, ಸಿಸಿಬಿ ವಿಚಾರಣೆಗೆ ನಾಳೆ ಬೆಳಗ್ಗೆ 10ಗಂಟೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಅದರ ಜೊತೆ ಕನ್ನಡ ರಿಯಾಲಿಟಿ ಶೋಗಳ ನಿರೂಪಕ, ನೂರು ಜನ್ಮಕ್ಕೂ ಸಿನಿಮಾದ ನಾಯಕ ನಟ ಸಂತೋಷ್ ಕುಮಾರ್ ಹಾಗೂ
ಪ್ರಭಾವಿ ರಾಜಕಾರಣಿ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಪುತ್ರ ಬಿಬಿಎಂಪಿ ಕಾರ್ಫೋರೇಟರ್ ಆರ್.ವಿ.ಯುವರಾಜ್ ಹೆಸರು ಕೇಳಿ ಬಂದಿದ್ದು, ಯುವರಾಜ್ ಗೂ ಸಿಸಿಬಿ ನೋಟೀಸ್ ಜಾರಿ ಮಾಡಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com