ಕಲೆಯ ಸೊಬಗನ್ನು ಹೆಚ್ಚಿಸುವ ಕ್ಯಾಮೆರಾ ಮ್ಯಾನ್!
ವೆಂಕಟೇಶ್ ಅಂಗುರಾಜ್ ಸರ್
Venkatesh Anguraj sir
ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು ಸಿನಿಮಾದಲ್ಲಿನ ಕೆಲಸ ತುಂಬಾನೇ ಇಷ್ಟವಾಯ್ತು. ಕರಾವಳಿಯನ್ನು ಕರಾರುವಕ್ಕಾಗಿ ತೋರಿಸಿದ್ದಾರೆ. (ಹವ್ಯಾಸಿ ವನ್ಯಜೀವಿ ಛಾಯಾಚಿತ್ರಗಾರನ ದೃಷ್ಟಿಕೋನದಿಂದ)
ಚಲನಚಿತ್ರಗಳ ಹಿನ್ನೆಲೆ ಸಂಗೀತದಲ್ಲಿ ಮಾತ್ರ ಸೀಮಿತವಾಗಿದ್ದ ಹಕ್ಕಿಗಳ ಕಲರವ, ಇವರ ಕ್ಯಾಮೆರಾದಲ್ಲಿ ತೆರೆಯ ಮೇಲೆಯೂ ಕಂಡಿವೆ.
ಕಾಸರಗೋಡಿನ ಜೀವನ ತೋರಿಸುವ ಮೊದಲನೆ ಹಾಡಿನಲ್ಲಿ ಮೊದಲು ಬರೋದು White-bellied Sea Eagle (ಬಿಳಿ-ಹೊಟ್ಟೆಯ ಮೀನು ಗಿಡುಗ), ತೆರೆಯ ಮೇಲೆ ಹಾರಿ ಹೋಗುವುದು. ಇದು ಕಡಲು ಹಾಗು ಹಿನ್ನೀರು ಇರುವ ಕಡೆ ಮಾತ್ರ ಕಂಡುಬರುವ ಹಕ್ಕಿ. ಹೆಸರೇ ಹೇಳುವಂತೆ ಮೀನು ಇದರ ಮುಖ್ಯ ಅಹಾರ.
ಆಮೇಲೆ ಕಚ್ಚಾ ರಸ್ತೆಯ ಗುಂಡಿಯಲ್ಲಿ ನಿಂತಿರುವ ನೀರ ಹೊಂಡದಲ್ಲಿ ಸ್ನಾನ ಮಾಡುತ್ತಿರುವ Shikra (ಬಿಜ್ಜು/ಸಣ್ಣ ಬಿಜ್ಜು) ಇದು ಎಲ್ಲಾ ಕಡೇ(ಬೆಂಗಳೂರಿನಂತ ಕಾಂಕ್ರಿಟ್ ಕಾಡಲ್ಲೂ) ಸಿಗುವ ಹಕ್ಕಿ. ಇದು ಸಣ್ಣ ಹಕ್ಕಿಗಳು, ಇಲಿ ಹಾಗು ಅಳಿಲನ್ನು ಬೇಟೆ ಹಾಡಿ ತಿನ್ನುವ ಹಕ್ಕಿ.
ನಂತರ ಮಕ್ಕಳು ಸಾಗೊ ಒಂದು ಪುಟ್ಟ ಓಣಿಯಲ್ಲಿ ಒಂದು ಕಪ್ಪೆಯ ಚಿತ್ರ. Gururaja Kv ಇವರು ಚಿತ್ರ ನೋಡಿದರೆ ಖಂಡಿತ ನಮಗೆ ಆ ಕಪ್ಪೆಯ ಬಗ್ಗೆ ಮಾಹಿತಿ ಸಿಗಬಹುದು.
ಮುಂದೆ ಅದೇ ಹಾಡು ಸಾಗುವಾಗ ಒಂದು ಬೇಲಿಯಲ್ಲಿ ಎರಡು Common Iora (ಮಧುರ ಕಂಠ) ಹಕ್ಕಿಗಳು. ಇವುಗಳ ಹಾಡು ಕೇಳಿಯೇ ಹೆಸರು ಇಟ್ಟಿದ್ದು.
ಮುಂದೆ ಸಿನಿಮಾ ಸಾಗಿದಂತೆ,
ಮಳೆ ತೋರಿಸುವಾಗ Malabar Gliding Frog(ಹಸಿರು ಹಾರುವ ಕಪ್ಪೆ) ಎಲೆಯ ಮೇಲೆ ಕುಳಿತಿರುವ ದೃಶ್ಯ. ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಕಂಡು ಬರುವ ಸುಂದರ ಕಪ್ಪೆ. ಮರಗಳ ಮೇಲೆ ವಾಸ, ಮರದಿಂದ ಮರಕ್ಕೆ ಹಾರುವಂತೆ ಬಾಸವಾದರು ಅವು ತಮ್ಮ ಕೈ-ಕಾಲುಗಳ ಬೆರಳ ನಡುವೆ ಇರುವ ಚರ್ಮದ (Webbing) ಸಹಾಯದಿಂದ ಗಾಳಿಯ ದಿಕ್ಕಿನಲ್ಲಿ ತೇಲಿ ಸೇರುತ್ತವೆ.
ಕಡಲ ಕಿನಾರೆಯಲ್ಲಿ ಹಾರುವ River/Common Tern (ನದಿ/ಕರಿಕೊಕ್ಕಿನ ರೀವ) ಹಕ್ಕಿಗಳು.
ಶಾಲೆ ಮುಚ್ಚಿದ ಸಮಯದಲ್ಲಿ ಮಂಕು ತೋರಿಸಲು ಶಾಲೆಯ ಗೋಡೆಯ ಮೇಲೆ ಹರಿಯುವ Millipede(ಒನಕೆಬಂಡಿ).
ಚಿಕ್ಕ ವಯಸ್ಸಲ್ಲಿ ಮೊದಲು ನೋಡಿ ಓಡಿ ಹೋಗದವರಿಲ್ಲ.
ಮೈಸೂರಿನಿಂದ ಅನಂತನಾಗ ಅವರನ್ನು ಕರೆತರುವಾಗ ಬಾನಿನಲ್ಲಿ ಹಾರೋ Cormorant (ಕಡಲು/ನೀರು ಕಾಗೆಗಳು). ಹಳ್ಳ, ನದಿ, ಸಮುದ್ರ ದಂಡೆಯಲ್ಲಿ ದಂಡಿಯಾಗಿ ಕೂತು ರೆಕ್ಕೆ ಬಿಚ್ಚಿ ಸೂರ್ಯನ ಕಿರಣಗಾಳಿಗೆ ಒಡ್ಡಿ ಕುಳಿತಿರುವುದನ್ನು ನಾವು ಕಂಡಿರುತ್ತೇವೆ.
ಇವೆಲ್ಲವು ಚಲನಚಿತ್ರದ ಸೊಗಡು ಸೊಬಗು ಎರಡನ್ನು ಇಮ್ಮಡಿಗೊಳಿಸಿವೆ.
ತುಂಬಾ ಸೊಗಸಾದ ಚಿತ್ರ. ಇದರ ಬಗ್ಗೆ ನನಗಿಂತ ತುಂಬಾ ಚೆನ್ನಾಗಿಯೇ ಬರೆದಿದ್ದಾರೆ.
ನನ್ನ ಮಿತ್ರರಿಗೆ ಈಗ ಒಂದು ಸವಾಲು.
#ಸಿನೆಮಾನೋಡಿವನ್ಯಜೀವಿಗಳನ್ನುಗುರುತಿಸಿ.
By–
ಹರೀಶ್ ಗೌಡ