ನಕ್ಕುನಗಿಸಿದ ಬುಲೆಟ್ ಪ್ರಕಾಶ್ ಇನ್ನಿಲ್ಲ..!!

Published on

400 Views

ಬೆಂಗಳೂರು – ಕನ್ನಡದ ಪ್ರಖ್ಯಾತ ಹಾಸ್ಯ ನಟ ನಿರ್ದೇಶಕ ಬುಲೆಟ್ ಪ್ರಕಾಶ್ ಅವರು ಅನಾರೋಗ್ಯದ ಕಾರಣದಿಂದ ಸೋಮವಾರದಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಖ್ಯಾತ ನಟರೊಂದಿಗೆ ಸಿನಿಮಾದಲ್ಲಿ ಅಭಿನಯಿಸಿದ ಬುಲೆಟ್. ಹಾಸ್ಯ ನಟರಾಗಿ ಚಂದನವನದಲ್ಲಿ ಪ್ರಖ್ಯಾತರಾಗಿದ್ದರು. ಇದೀಗ ಅವರ ನಿಧನ ಕನ್ನಡ ಚಿತ್ರ ರಂಗಕ್ಕೆ ತುಂಬಾಲಾರದ ನಷ್ಟ ವುಂಟಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲಸುತ್ತಿದ್ದ ಅವರು ಕೆಲವು ದಿನಗಳ ಹಿಂದೆ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

‘ಓಂ’ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟ ಪ್ರಕಾಶ್ ಸುಮಾರು 325ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸುಮಾರು ‌25ವರ್ಷಗಳಿಂದ ಚಿತ್ರರಂಗದಲ್ಲಿ ತನ್ನ ಹಾಸ್ಯ ನಟನೆಯ ಮೂಲಕ, ಹಲವಾರು ಹಿರಿಯ ನಟರ ಜೊತೆ ಪರದೆ ಹಂಚಿಕೊಂಡಿರು ಬುಲೆಟ್ ಪ್ರಕಾಶ್ ಕನ್ನಡ ಮಾತ್ರವಲ್ಲದೆ ‌ತುಳು ಸಿನಿಮಾದಲ್ಲೂ‌ ಅಭಿನಯಿಸಿದ್ದಾರೆ. ಬುಲೆಟ್ ಗೆ ಇತ್ತೀಚೆಗಷ್ಟೇ ತೂಕ ಇಳಿಸಿಕೊಳ್ಳುವ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಆ ಆಪರೇಷನ್ ನಂತರ ಖಾಯಿಲೆಗಳು ಅವರ ಬೆನ್ನು ಹತ್ತಿದ್ದವು. ಈಗ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ನಾಳೆ ಅಂತ್ಯಕ್ರಿಯೆ ‌ನಡೆಯಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com