ಕನ್ನಡ ನಾಡಲ್ಲಿ ಒಂದು ಸ್ಟುಡಿಯೋ ಕಟ್ಟಿಸಿಕೊಡಿ :ಯಶ್ ರಾಜ್ಯ ಸರ್ಕಾರಕ್ಕೆ ಮನವಿ

Published on

332 Views

ಬೆಂಗಳೂರಿನಲ್ಲಿ 12 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಉದ್ಘಾಟನಾ ಸಂದರ್ಭದಲ್ಲಿ ಆ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಕನ್ನಡ ನಾಡಲ್ಲಿ ಒಂದು ಸ್ಟುಡಿಯೋ ಕಟ್ಟಿಸಿ ಎಂದು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದರು. ಕನ್ನಡ ನಾಡಲ್ಲಿ ಒಂದು ಸ್ಟುಡಿಯೋ ಕಟ್ಟಿಸಿಕೊಡಿ, ನಮ್ಮ ಹುಡುಗರು ದೊಡ್ಡದಾಗಿ ಸಾಧಿಸಿ ತೋರಿಸುತ್ತಾರೆ ಅಂತಾ ರಾಕಿಂಗ್ ಸ್ಟಾರ್ ಯಶ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಸ್ಟುಡಿಯೋಗಾಗಿ ಬೇರೆ ರಾಜ್ಯಗಳತ್ತ ಹೋಗಿ ಹೋಗಿ ಸಾಕಾಗಿದೆ. ನಮ್ಮಲ್ಲೇ ಒಂದು ಸ್ಟುಡಿಯೋ ಕಟ್ಟಿಸಿ.. ನಮ್ಮ ಹುಡುಗರು ದೊಡ್ಡದಾಗಿ ಸಾಧಿಸಿ ತೋರಿಸುತ್ತಾರೆ. ನೀವು ಕಟ್ಟಿಸಿಕೊಟ್ಟಲ್ಲಿ ಭಾರತ ತಿರುಗಿ ನೋಡುವಂಥ ಸಿನಿಮಾ ಮಾಡಿ ತೋರಿಸ್ತೀವಿ. ನಿಮ್ಮ ಆಡಳಿತಾವಧಿಯಲ್ಲಿ ಇದೊಂದು ಕಾರ್ಯ ಮಾಡಿಕೊಡಿ ಅಂತಾ ಯಶ್ ಸಿಎಂಗೆ ಮನವಿ ಮಾಡಿಕೊಂಡ್ರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com