ಸಿರಿಕನ್ನಡ ವಾಹಿನಿಯಲ್ಲಿ ವಿಭಿನ್ನ ಕಥೆಯ ಹೊಚ್ಚ ಹೊಸ ಧಾರವಾಹಿಗಳು

Published on

357 Views

ಕನ್ನಡಿಗರಿಂದ, ಕನ್ನಡಿಗರಿಗಾಗಿ ಆರಂಭವಾದ ಸಿರಿಕನ್ನಡ ವಾಹಿನಿ, ಒಂದೂವರೆ ವರ್ಷದ ತನ್ನ ಜರ್ನಿಯಲ್ಲಿ ಹಲವಾರು ವಿಭಿನ್ನ ಕಾರ್ಯಕ್ರಮಗಳೊಂದಿಗೆ, Evergreen ಮತ್ತು Blockbuster ಸಿನಿಮಾಗಳನ್ನು ವೀಕ್ಷಕರಿಗೆ ನೀಡುವ ಮೂಲಕ ಮನರಂಜಿಸುತ್ತಾ ಬಂದಿದೆ.

ಇದೀಗ ಮನರಂಜನೆಯ ಮತ್ತೊಂದು ಹಂತಕ್ಕೆ ಹೆಜ್ಜೆ ಇಟ್ಟಿರೋ ನಿಮ್ಮ ಸಿರಿಕನ್ನಡ ಇದೇ ಜೂನ್ 22 ರಿಂದ ರಾತ್ರಿ 7:30-9:30ರವರೆಗೆ ವಿಭಿನ್ನ ಕಥೆಯ ಹೊಚ್ಚ ಹೊಸ ಧಾರವಾಹಿಗಳನ್ನು ವೀಕ್ಷಕರ ಮನೆ ಮನಕ್ಕೆ ತಲುಪಿಸುತ್ತಿದೆ.

ರಾತ್ರಿ 7:30ಕ್ಕೆ “ಅಗ್ನಿನಕ್ಷತ್ರ” ಧಾರವಾಹಿ ಪ್ರಸಾರವಾಗುತ್ತಿದ್ದು, ಈ ಧಾರವಾಹಿ ಪ್ರೀತಿಯ ವಿಭಿನ್ನ ಆಯಾಮಗಳನ್ನು ಪರಿಚಯಿಸುತ್ತಾ ಸಾಗುವ ಮನರಂಜನಾ ಕಥೆಯಾಗಿದೆ. 8 ಗಂಟೆಗೆ ಪ್ರಸಾರವಾಗೋ “ತರಂಗಿಣಿ” ಧಾರವಾಹಿ ಮೂವರು ಗೆಳತಿಯರ ಜೀವನ ಸಂಘರ್ಷದ ಕಥೆ ಹೊಂದಿದ್ದರೆ, 8:30ಕ್ಕೆ ಪ್ರಸಾರವಾಗೋ “ಜಗದೇಕವೀರ ಜೊತೆಯಲಿ ಸುಂದರಿ” ವಿಶಿಷ್ಟ Soಛಿio ಈಚಿಟಿಣಚಿsಥಿಯ ಕಥೆಯನ್ನು ಹೊಂದಿದೆ. ರಾತ್ರಿ 9 ಗಂಟೆಗೆ “ಗೊಂಬೆಮನೆ” ಧಾರವಾಹಿ ಪ್ರಸಾರವಾಗುತ್ತಿದ್ದು, ಈ ಧಾರವಾಹಿ ಅಕ್ಕ-ತಂಗಿಯ ಪ್ರೀತಿ-ವಾತ್ಸಲ್ಯದ ಕಥೆ ಹೊಂದಿದೆ.

ವಾಹಿನಿಯ ಮುಖ್ಯಸ್ಥರಾದ ಸಂಜಯ್ ಶಿಂಧೆರವರು ಹೇಳುವಂತೆ, ಇದೀಗ ಪ್ರಸಾರವಾಗುವ ಧಾರವಾಹಿಗಳು ಉತ್ತಮ ಕಥೆ ಮತ್ತು ಮನರಂಜನಾ ಅಂಶವನ್ನು ಹೊಂದಿದ್ದು, ವೀಕ್ಷಕರನ್ನು ಸೆಳೆಯಲಿವೆ. ಇದಲ್ಲದೇ ಕನ್ನಡದ ಹೆಸರಾಂತ ಕಾದಂಬರಿಗಳನ್ನು ಧಾರವಾಹಿ ಮಾಡುವ ಯೋಜನೆ ಹೊಂದಿದ್ದು, ಆ ನಿಟ್ಟಿನಲ್ಲಿ ವಾಹಿನಿಯ ಕ್ರಿಯೇಟಿವ್ ತಂಡ ಕಾರ್ಯನಿರತವಾಗಿದ್ದು, ಶೀಘ್ರದಲ್ಲೇ ಆ ಧಾರವಾಹಿಗಳನ್ನು ನಿಮ್ಮ ಸಿರಿಕನ್ನಡದಲ್ಲಿ ನೋಡಬಹುದಾಗಿದೆ.

ಈ ರೀತಿ ಪ್ರೇಕ್ಷಕರ ಮನರಂಜನೆಗೆ ಮತ್ತು ಅಭಿರುಚಿಗೆ ತಕ್ಕಂತೆ ಹೊಸ ಹೆಜ್ಜೆಗಳನ್ನಿಡುತ್ತಿರೋ ನಿಮ್ಮ ಸಿರಿಕನ್ನಡವನ್ನು ವೀಕ್ಷಕರು ಮೆಚ್ಚಿ ಹರಸಬೇಕೆಂಬುದು ಸಿರಿಕನ್ನಡ ತಂಡದ ಆಶಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com