ಬೃಹಸ್ಪತಿ` ರಾಜ್ಯಾದ್ಯಂತ ತೆರೆಗೆ
ಬೃಹಸ್ಪತಿ` ರಾಜ್ಯಾದ್ಯಂತ ತೆರೆಗೆ
ಮುನಿರತ್ನಂ ನಾಯ್ಡು ಅರ್ಪಿಸುವ, ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿರುವ `ಬೃಹಸ್ಪತಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ ನಿರ್ದೇಶನ, ರವಿವರ್ಮ, ಥ್ರಿಲ್ಲರ್ ಮಂಜು ಸಾಹಸ ನಿರ್ದೆಶ್ನ ಹಾಗೂ ಇಸ್ಮಾಯಿಲ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ಕವಿರಾಜ್, ನಾಗೇಂದ್ರಪ್ರಸಾದ್, ಯೋಗಾನಂದ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ.
ಮನೋರಂಜನ್ ರವಿಚಂದ್ರನ್ ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕನ್ನಿಕಾ, ಸಿತಾರ, ಸಾಯಿಕುಮಾರ್, ಅವಿನಾಶ್, ಸಾಧುಕೋಕಿಲ, ವೀಣಾಸುಂದರ್ ಮುಂತಾದವರಿದ್ದಾರೆ.