ಕೆಜಿಎಫ್ ಸಿನಿಮಾವನ್ನು ಹೊಗಳಿದ ಬಾಲಿವುಡ್ ನಟಿ..!!!

Published on

278 Views

‘ಕೆಜಿಎಫ್’ ಸಿನಿಮಾ ಎಲ್ಲ ಕಡೆ ಸದ್ದು ಮಾಡುತ್ತಿದ್ದು, ಎಲ್ಲರಲ್ಲೂ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಸ್ಯಾಂಡಲ್ವುಡ್ ಮಾತ್ರವಲ್ಲದೆ ತೆರೆಕಂಡ ಎಲ್ಲ ಭಾಷೆಗಳಲ್ಲೂ ‘ಕೆಜಿಎಫ್’ ತನ್ನ ಹವಾ ಸೃಷ್ಟಿ ಮಾಡಿದೆ. ಬಾಲಿವುಡ್ ನಲ್ಲಿ ‘ಕೆಜಿಎಫ್’ ಜೊತೆ ತೆರೆಕಂಡ ಶಾರುಖ್ ಖಾನ್ ಅಭಿನಯದ ‘ಜೀರೋ’ ಸಿನಿಮಾ ಕೂಡ ‘ಕೆಜಿಎಫ್’ ಎದುರು ಜೀರೋ ಆಯಿತು. ಬಾಲಿವುಡ್ ನಲ್ಲಿ‌ ಸಖತ್ ಸೌಂಡ್ ಮಾಡಿದ ‘ಕೆಜಿಎಫ್’ ಚಿತ್ರಕ್ಕೆ ಬಾಲಿವುಡ್ ಮಂದಿ ಶಭಾಷ್ ಎಂದಿದ್ದಾರೆ. ಸಿನಿಮಾ ನೋಡಿ ಮೆಚ್ಚಿಕೊಂಡವರಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಒಬ್ಬರು. ಸಿನಿಮಾ ನೋಡಿದ ರವೀನಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ‘ಕೆಜಿಎಫ್’ ದೇಶಾದ್ಯಂತ ಸದ್ದು ಮಾಡುತ್ತಿದೆ. ‘ಕೆಜಿಎಫ್’ ಸಿನಿಮಾವನ್ನು ಎಲ್ಲರೂ‌ ನೋಡಿ. ಯಶ್ ಅದ್ಭುತವಾಗಿ ನಟನೆ ಮಾಡಿದ್ದಾರೆ. ಸಿನಿಮಾವೂ ಅದ್ಭುತ ವಾಗಿ‌ ಮೂಡಿಬಂದಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com