ಡಿಫರೆಂಟ್ ಗೆಟಪ್ ನಲ್ಲಿ ಬಾಲಿವುಡ್ ನಟ ಅನಿಲ್‌ ಕಪೂರ್!

Published on

406 Views

ಬಾಲಿವುಡ್‌ ಸೂಪರ್ ಸ್ಟಾರ್ ಅನಿಲ್‌ ಕಪೂರ್‌ ಅವರ ವಯಸ್ಸು 61 ಆದರೂ ಈಗಲೂ ನಟನಾ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅನಿಲ್‌ ಕಪೂರ್‌ ಅವರು ಸಲ್ಮಾನ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರೇಸ್‌– 3’ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗು ಬಾಲಿವುಡ್ ಎವರ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ರಾಜ್‌ಕುಮಾರ್‌ ರಾವ್‌ ಅಭಿನಯದ ‘ಫನ್ನೆ ಖಾನ್‌’ ಹಾಗೂ ಮಗಳು ಸೋನಂ ಕಪೂರ್‌ ಅಹುಜಾ ಅವರ ‘ಏಕ್‌ ಲಡ್ಕಿ ಕೊ ದೇಖಾ ತೋ ಐಸಾ ಲಗಾ’ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿಸಲಾಗಿದೆ. ಹಾಗೆಯೇ 90ರ ದಶಕದ ತಮ್ಮ ಸಹನಟಿ ಮಾಧುರೀ ದೀಕ್ಷಿತ್‌ ಅವರ ‘ಟೋಟಲ್‌ ಧಮಾಲ್‌’ ಚಿತ್ರದಲ್ಲೂ ಸಹ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com