ರಕ್ಷಿತ್ ಶೆಟ್ಟಿ‌ ಅಭಿನಯದ‌ ‘777 ಚಾರ್ಲಿ’ ಚಿತ್ರಕ್ಕೆ ಎಂಟ್ರಿ‌ ಕೊಟ್ಟ‌ ಬಾಬಿ‌ ಸಿಂಹ…

Published on

356 Views

ರಕ್ಷಿತ್ ಶೆಟ್ಟಿ‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘777 ಚಾರ್ಲಿ’ ಚಿತ್ರಕ್ಕೆ ತಮಿಳು, ಮಲಯಾಳಂ ಹಾಗೂ ತೆಲುಗಿನ‌ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಬಾಬಿ ಸಿಂಹ ಅವರು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ‘777 ಚಾರ್ಲಿ’ ಚಿತ್ರದಲ್ಲಿ ಚಿತ್ರದ ನಾಯಕ‌ ರಕ್ಷಿತ್ ಶೆಟ್ಟಿಯ‌ ಪ್ರಯಾಣದಲ್ಲಿ ನಿರ್ಣಾಯಕ ಹಂತದಲ್ಲಿ ಬಾಬಿ‌ ಸಿಂಹ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು‌ ಚಿತ್ರದ ನಿರ್ದೇಶಕ ಕಿರಣ್ ರಾಜ್ ಕೆ‌ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಬಾಬಿ‌ ಸಿಂಹ ಅವರ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನ್ನು ಬಿಡುಗಡೆ ಮಾಡಿ, ಬಾಬಿ ಸಿಂಹ ಅವರ‌ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದಾರೆ. ‘777 ಚಾರ್ಲಿ’ ಸಿನಿಮಾದ ಪೋಸ್ಟರ್ ನಲ್ಲಿ ರಕ್ಷಿತ್ ಶೆಟ್ಟಿ, ಬಾಬಿ‌ ಸಿಂಹ‌ ಮತ್ತು ಎರಡು ಲ್ಯಾಬ್ರಡಾರ್ ನಾಯಿಗಳಿರುವುದು ಕಂಡು ಬಂದಿದೆ. ಈಗಾಗಲೇ ಬಾಬಿ‌ ಸಿಂಹ ಅವರ ಚಿತ್ರೀಕರಣ ಪೂರ್ಣಗೊಂಡಿದ್ದು, ಒಂದು‌ ವಾರಗಳ ಕಾಲ ಕೊಡೈಕನಾಲ್ ನಲ್ಲಿ ಚಿತ್ರೀಕರಣ ‌ನಡೆಸಿದೆ ಎಂದು‌‌ ತಿಳಿದು ಬಂದಿದೆ. ‘777 ಚಾರ್ಲಿ’ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ‘ಪುಷ್ಕರ್ ಫಿಲ್ಮ್ಸ್‌’ ಮತ್ತು ರಕ್ಷಿತ್ ಶೆಟ್ಟಿಯವರ‌‌ ‘ಪರಂವಃ ಸ್ಟುಡಿಯೋಸ್’ ಜೊತೆಯಾಗಿ‌ ಈ‌ ಚಿತ್ರವನ್ನು ನಿರ್ಮಿಸುತ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com