ಕಿಚ್ಚ ಬಿಡುಗಡೆ ಮಾಡಿದ ಬಿಚ್ಚುಗತ್ತಿಯ ಹಾಡುಗಳು

Published on

321 Views

ಬಿಚ್ಚುಗತ್ತಿ ಈಗಾಗಲೇ ಟೀಸರ್ ಮತ್ತು ಫಸ್ಟ್ ಲುಕ್ ನಿಂದ ಸದ್ದು ಮಾಡ್ತಿರರೋ ಸಿನಿಮಾ..ಹರಿ ಸಂತು ನಿರ್ದೇಶನ ರಾಜವರ್ಧನ್ ಅಭಿನಯದ ಬಿಚ್ಚುಗತ್ತಿ ಚಿತ್ರದ ಹಾಡೊಂದು ಇಂದು ರಿಲೀಸ್ ಆಗಿದೆ …ವಿಶೇಷ ಅಂದ್ರೆ ಕಿಚ್ಚ ಸುದೀಪ್ ಹಾಡನ್ನ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಷಯ ಕೋರಿದ್ದಾರೆ …

ಕಿಚ್ಚ ಸುದೀಪ್ ರಿಂದ ಬಿಚ್ಚುಗತ್ತಿ ಲಿರಿಕಲ್ ವಿಡಿಯೋ ರಿಲೀಸ್..

ಮದಕರಿನಾಯಕ‌ ಅಂತಾನೇ ಖ್ಯಾತಿ ಪಡೆದಿರೋ ಕಿಚ್ಚ ಸುದೀಪ್ ರಿಂದ ಬಿಚ್ಚುಗತ್ತಿ ದುರ್ಗದ ಹೆಬ್ಬುಲಿ ಸಾಂಗ್ ರಿಲೀಸ್ ಮಾಡಿಸಲಾಗಿದೆ…ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾಮಹೋತ್ಸವದಲ್ಲಿ ಕಿಚ್ಚ ಸುದೀಪ್ ವಿಶೇಷ ಆಹ್ವಾನಿತರಾಗಿ ಭಾಗಿ ಆಗಿದ್ದರು…ಇದೇ ಸಮಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಬಿಚ್ಚುಗತ್ತಿ ಚಿತ್ರದ ದುರ್ಗದ ಹೆಬ್ಬುಲಿ ಲಿರಿಕಲ್ ವಿಡಿಯೋ‌ ಹಾಡನ್ನ ರಿಲೀಸ್ ಮಾಡಿದ್ರು. ಕಿಚ್ಚ ಸುದೀಪ್ ಗೆ ವಾಲ್ಮೀಕಿ ಮಠದ ಶ್ರೀಗಳು ಸಾಥ್ ನೀಡಿದ್ರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com