ಶುಕ್ರವಾರ ರಾಜ್ಯಾದಾದ್ಯಂತ ಜಳಪಿಸಲಿದೆ ದುರ್ಗದ ಬಿಚ್ಚುಗತ್ತಿ..!!!
ಬಿಚ್ಚುಗತ್ತಿ ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ರಿಲೀಸ್ ಆಗ್ತಿರೋ ಅದ್ಧೂರಿ ಐತಿಹಾಸಿಕ ಸಿನಿಮಾ. ತುಂಬಾ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ದುರ್ಗದ ದಳವಾಯಿ ದಂಗೆಯನ್ನ ಸಾರೋ ಕಥೆ. ಟೀಸರ್, ಟ್ರೈಲರ್ ಮತ್ತು ಹಾಡುಗಳಿಂದ ಕನ್ನಡ ಸಿನಿಪ್ರಿಯರನ್ನ ಭಿನ್ನವಾಗಿ ಸೆಳೆದಿರೋ, ನಿರೀಕ್ಷೆ ಹುಟ್ಟಿಸಿರೋ ಬಿಚ್ಚುಗತ್ತಿ ಸಿನಿಮಾ ಇದೇ ವಾರ ಅಂದ್ರೆ 28ನೇ ತಾರೀಖು ಶುಕ್ರವಾರ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಕನ್ನಡದ ಹೆಮ್ಮೆಯ ಮಣ್ಣಿನ ಕಥೆಯನ್ನ, ಇತಿಹಾಸವನ್ನ ಸಾರಲು ಬರ್ತಿರೋ ಈ ಸಿನಿಮಾ ಹಲವು ವಿಶೇಷತೆಗಳಿಂದ ಸದ್ದು ಸುದ್ದಿಯಲ್ಲಿದೆ.
ಕಲ್ಲಿನ ಕೋಟೆ ನಾಡು ಚಿತ್ರದುರ್ಗದ ಮಣ್ಣಿನ ಕಥೆಯನ್ನ ಹೇಳುವು ಇತಿಹಾಸವನ್ನ ಮರುಸೃಷ್ಟಿಸಿರೋ ನಿರ್ದೇಶಕ ಹರಿಸಂತು ಅಷ್ಟೇ ನೈಜವಾಗಿ ಚಿತ್ರವನ್ನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಟೆಕ್ನಿಕಲಿ ತುಂಬಾನೇ ಸ್ಟ್ರಾಂಗ್ ಆಗಿ ಕಾಣ್ತಿರೋ ಬಿಚ್ಚುಗತ್ತಿ ಸಿನಿಮಾ ಬಾಹುಬಲಿ ಸಿನಿಮಾವನ್ನ ನೆನಪಿಸ್ತಿದೆ ಅಂತ ಟ್ರೈಲರ್ ನೋಡಿದವರು ಹೇಳ್ತಿದ್ದಾರೆ. ಈ ಮೂಲಕ ಬಿಚ್ಚುಗತ್ತಿ ಸಿನಿಮಾ ಕನ್ನಡ ಹೆಮ್ಮೆಯ ಸಿನಿಮಾಗಳ ಸಾಲಿಗೆ ಸೇರೋ ಭರವಸೆ ಹುಟ್ಟಿಸಿದೆ.. ದಳವಾಯಿ ದಂಗೆಯ ಸಾಹಸಗಳು, ಸನ್ನಿವೇಷಗಳು ಮತ್ತು ಕಾಲಗಟ್ಟ ಅಷ್ಟು ಮಜಭೂತಾಗಿ ಸೆರೆಯಾಗಿದೆ. ಬಿಚ್ಚುಗತ್ತಿ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ ಅಂಗಳದಲ್ಲಿ ಅದ್ಧೂರಿಯಾಗಿ ಎಂಟ್ರಿಕೊಡ್ತಿರೋ ರಾಜ್ ವರ್ಧನ್ ಪ್ರಾಮಿಸಿಂಗ್ ಆಗಿ ಕಾಣಿಸಿದ್ದಾರೆ. ಈಗಾಗ್ಲೇ ಕನ್ನಡಕ್ಕೆ ಮತ್ತೊಬ್ಬ ಆರಡಿ ಹೈಟ್ ಇರೋ ಭರವಸೆಯ ಹೀರೋ ಸಿಕ್ಕಿದ್ದಾನೆಂದು ಸುದ್ದಿಯಾಗ್ತಿದೆ. ಇವರ ಜೋಡಿಯಾಗಿ ಹರಿಪ್ರಿಯ ಕಾಣಿಸಿಕೊಂಡಿದ್ದು, ಹರಿಪ್ರಿಯ ಪಾತ್ರ ಸಖತ್ ಅಟ್ರ್ಯಾಕ್ಟೀವ್ ಆಗಿದೆ.
ಬಾಹುಬಲಿಯಲ್ಲಿ ಕಾಲಕೇಯನ ಪಾತ್ರ ಮಾಡಿದ್ದ ಪ್ರಭಾಕರ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಆರ್ಭಟಿಸಿದ್ದಾರೆ. ಚಿತ್ರದಲ್ಲಿ ಪ್ರಭಾಕರ್ ಪಾತ್ರವೂ ಹೈಲೈಟ್ ಆಗಿ ಕಾಣ್ತಿದೆ. ಇನ್ನು ಉಳಿದಂತೆ. ಚಿತ್ರದ ತಾರಾಗಣ ದೊಡ್ಡದಾಗಿದ್ದು, ಎಲ್ಲಾ ಹಿರಿಯ ಮತ್ತು ಅನುಭವಸ್ಥ ಕಲಾವಿದ್ರು ಚಿತ್ರದಲ್ಲಿದ್ದಾರೆ. ಟ್ರೈಲರ್ ನಲ್ಲಿ ಎಲ್ಲಾ ಪಾತ್ರಗಳು ನೈಜವಾಗಿ ಕಾಣ್ತಿದ್ದು, ಸಿನಿಮಾದೂದಕ್ಕೂ ಆ ಕಾಲದ ಮೆರಗು ಮೇಳೈಸಿರೋ ಹಾಗಿದೆ. ನಕುಲ್ ಅಭಯಂಕರ್ , ಹಂಸಲೇಖ ಸಂಗೀತ ಸಂಯೋಜನೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರೋ ಹಾಡುಗಳು ಇಂಪ್ರೆಸೀವ್ ಆಗಿವೆ. ಬಿ.ಎಲ್ ವೇಣು ಅವ್ರ ಲೇಖನಿ ಇರೋ ಬಿಚ್ಚುಗತ್ತಿ ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ತುಂಬಾ ಪಾಸಿಟೀವ್ ಆಗಿ ಕಾಣ್ತಿದೆ. ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣದ ಬಿಚ್ಚುಗತ್ತಿ ತುಂಬು ನಿರೀಕ್ಷೆಯಲ್ಲಿ ಇದೇ ಶುಕ್ರವಾರ ರಾಜ್ಯದಾದ್ಯಂತ ತೆರೆಗೆ ಬರ್ತಿದ್ದು ಆಗ್ಲೇ ಥಿಯೇಟರ್ ಲಿಸ್ಟ್ ನ ಕೊಡ ಅನೌನ್ಸ್ ಮಾಡಿದೆ.