ಭೋಜನ ಬಡಿಸಲು ಬರುತ್ತಿದ್ದಾರೆ ‘ಭೀಮಸೇನ ನಳಮಹಾರಾಜ’…

Published on

398 Views

ಕಾಮಿಡಿ ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ‘ಭೀಮಸೇನ ನಳಮಹಾರಾಜ’ ತಂದೆ ಮಗಳ ಬಾಂಧವ್ಯ ಹೊಂದಿರುವ ಈ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ.

ಸದ್ಯಕ್ಕೆ ರಿಲೀಸ್ ಗೆ ರೆಡಿಯಾಗಿರುವ ‘ಭೀಮಸೇನಾ ನಳಮಹಾರಾಜ’ ರಿಲೀಸ್ ಗೂ ಮುನ್ನ ಚಿತ್ರದ 2 ಡಿಫ್ರೆಂಟ್ ಟೀಸರ್ ಗಳು ಸೋಶಿಯಲ್ ‌ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದರಿಂದ ಸಿನಿರಸಿಕರಲ್ಲಿ ಕುತೂಹಲ ಇನ್ನು ಹೆಚ್ಚಾಗಿದೆ. ‘ಭೀಮಸೇನ ನಳಮಹಾರಾಜ’ ಸಿನಿಮಾವನ್ನು ಕಾರ್ತಿಕ್ ಸರಗೂರ್ ನಿರ್ದೇಶನ ಮಾಡಿದ್ದು, ಅರವಿಂದ್ ಅಯ್ಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೇಶ್, ಅಚ್ಯುತ್ ಕುಮಾರ್ ಮತ್ತು ಆದ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ.ರಾವ್ ನಿರ್ಮಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com