ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಬಹದ್ದೂರ್ ಚೇತನ್ ಅವರ ಭರಾಟೆ ಟೀಸರ್

Published on

372 Views

ಬಹದ್ದೂರ್ ಹಾಗೂ ಭರ್ಜರಿ ಚಿತ್ರಗಳ ನಂತರ ಚೇತನ್ ಕುಮಾರ್ ಅವರು ಶ್ರೀಮುರಳಿ ಅಭಿನಯದಲ್ಲಿ ಭರಾಟೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹೆಚ್ಚಿಸುತ್ತಿದೆ‌. ಮಫ್ತಿ ಚಿತ್ರದ ನಂತರ ಶ್ರೀ ಮುರುಳಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇದೇ ತಿಂಗಳ 17ರಂದು ನಟ ಶ್ರೀ ಮುರಳಿ ಅವರ ಹುಟ್ಟು ಹಬ್ಬ. ಈ ದಿನದಂದು ಅಭಿಮಾನಿಗಳಿಗೆ ಉಡುಗೊರೆಯಾಗಿ ಭರಾಟೆ ಚಿತ್ರದ ಟೀಸರ್ ಅನ್ನು ನೀಡುತ್ತಿದ್ದಾರೆ. ಮುರಳಿ ಅವರಿಗೆ ಜೋಡಿಯಾಗಿ ಕಿಸ್ ಚಿತ್ರದಲ್ಲಿ ನಟಿಸುತ್ತಿರುವ ಶ್ರೀಲೀಲಾ ಅವರು ಕಾಣಿಸಿಕೊಂಡಿದ್ದಾರೆ.‌ ರಾಜಸ್ಥಾನ್ ಬೆಂಗಳೂರು ಸೇರಿದಂತೆ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಶ್ರೀ ಜಗದ್ಗುರು ಮೂವೀಸ್ ಬ್ಯಾನರ್ ಅಡಿಯಲ್ಲಿ ಸುಪ್ರಿತ್ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com