ತೆರೆಗೆ ಬರಲಿದೆ ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ “ಭರಾಟೆ”

Published on

372 Views

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ “ಭರಾಟೆ” ಸಿನಿಮಾ ತೆರೆಕಾಣುತ್ತಿದೆ.
ಚೇತನ್ ಕುಮಾರ್ ನಿರ್ದೇಶನದ ಭಾರಿ ಕುತೂಹಲ ಮೂಡಿಸಿರುವ ‘ಭರಾಟೆ’ ಚಿತ್ರವೂ ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಸಾಯಿಕುಮಾರ್,ರವಿಶಂಕರ್ ಸಹೋದರರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ವಿಶೇಷ.


ಇದೊಂದು ಪಕ್ಕಾ ಮಾಸ್ ಚಿತ್ರವಾಗಿದ್ದು, ಕುಟುಂಬ ಸಮೇತರಾಗಿ ನೋಡುವಂತಹ‌ ಸಿನಿಮಾ ಇದಾಗಿದೆ. ಶ್ರೀಮುರಳಿ ಈ ಹಿಂದೆ ಎಂದೂ ನಟಿಸದ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಆದರೆ, ಇದರಲ್ಲಿರೋ ಮಾಸ್ ಸನ್ನಿವೇಶಗಳು ಮಾತ್ರ ಬೇರೆಯದ್ದೇ ದಿಕ್ಕಿನಲ್ಲಿವೆ. ಈ ವಾರದ ಬಹುನಿರೀಕ್ಷಿತ ಚಿತ್ರವಾದ “ಭರಾಟೆ” ಯನ್ನು ಪ್ರೇಕ್ಷಕರು ಯಾವ ರೀತಿಯಾಗಿ‌ ಸ್ವೀಕರಿಸುತ್ತಾರೆ ನೋಡಬೇಕಷ್ಟೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com