ಭಾನು ಭೂಮಿಯ ಪ್ರೇಮ ಸಲ್ಲಾಪಕ್ಕೆ ಮುಹೂರ್ತ!

Published on

474 Views

ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಜೆ ಕೆ ಆದಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ `ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಸಮಾರಂಭ ನಡೆಯುವ ಮೂಲಕ ಚಾಲನೆ ಸಿಕ್ಕಿದೆ. sÀಕ್ಕೆ ಪ್ರಸ್ಟೀನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ರಾಜಕೀಯ ಧುರೀಣ ಡಾ.ಹೆ.ಚ್.ಎಂ..ಪ್ರಸನ್ನ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಗೋಕಾಕ್ ಮೂಲಕದ ಮರಳು ವ್ಯಾಪಾರಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಸೂರ್ಯ ಪ್ರಭ್ ಮತ್ತು ರಶಿತಾ ಮಲ್ನಾಡ್ ನಾಯಕ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಮೂಲತಃ ಐಟಿ ಉದ್ಯೋಗಿಯಾಗಿರುವ ಸೂರ್ಯಪ್ರಭ್ ಅವರು ರಾಜ್‍ಕುಮಾರ್ ಅವರ ಅಭಿಮಾನಿ. ರಾಜ್ ಪ್ರಭಾವದಿಂದಲೇ ಅವರು ಕೈ ತುಂಬಾ ಕಾಸು ನೀಡುತ್ತಿದ್ದ ಐಟಿ ಉದ್ಯೋಗ ತೊರೆದು ಬಣ್ಣ ಹಚ್ಚಲು ಮುಂದಾಗಿದ್ದಾರೆ.

ಸಾಮಾನ್ಯವಾಗಿ ಕಣ್ಣಮುಂದೆಯೇ ಇದ್ದರೂ ಭೇಟಿಯಾಗದ ದುರಂತಕ್ಕೆ ರೂಪಕವಾಗಿ ಭಾನು ಮತ್ತು ಭೂಮಿಯನ್ನು ರೂಪಕವಾಗಿ ಬಳಸಲಾಗುತ್ತದೆ. ಅಂಥಾದ್ದೇ ಹೆಸರನ್ನು ಶೀರ್ಷಿಕೆಯಾಗಿಟ್ಟುಕೊಂಡಿರುವ ನಿರ್ದೇಶಕ ಅಭಿ ಅಪ್ಪಟ ನೆಲದ ಸೊಗಡಿನ ಪ್ರೇಮ ಕಥಾನಕವೊಂದನ್ನು ಹೇಳಲು ಹೊರಟಿದ್ದಾರಂತೆ. ಇಡೀ ಕಥೆ ಮೈಸೂರಿನ ಭೂಮಿಕೆಯಲ್ಲಿ ಅರಳಿಕೊಂಡು ಅಲ್ಲಿಯೇ ನಡೆಯೋದು ಅಸಲೀ ವಿಶೇಷ. ಈ ವರೆಗೆ ಎರಡ್ಮೂರು ಚಿತ್ರಗಳಲ್ಲಿ ನಟಿಸಿದ್ದರೂ ಅವ್ಯಾವುವೂ ಬಿಡುಗಡೆಯಾಗದ ಚಿಂತೆಯಲ್ಲಿರುವ ರಶಿತಾ ಅವರದ್ದು ಈ ಚಿತ್ರದಲ್ಲಿ ಚೆಂದದ ಪಾತ್ರವಂತೆ. ಅಂದಹಾಗೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಕೊಡಗು, ಸಕಲೇಶಪುರ ಮತ್ತು ಕಾರವಾರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆ¸ಸಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.

ಈ ಚಿತ್ರದ ನಾಲಕ್ಕು ಹಾಡುಗಳಿಗೆ ಲೋಕಿ ಸಂಗೀತ ನೀಡಲಿದ್ದಾರೆ. ಸಂಗೀತದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿರುವ ನಿರ್ಮಾಪಕರು ಈ ಚಿತ್ರದಲ್ಲಿ ಎಲ್ಲ ಹಾಡುಗಳೂ ಮೆಲೋಡಿಯಾಗಿರ ಬೇಕೆಂದು ಬಯಸಿದ್ದಾರಂತೆ. ಅದಕ್ಕೆ ತಕ್ಕುದಾದ ಹಾಡುಗಳನ್ನು ರೂಪಿಸಲು ಲೋಕಿ ತಯಾರಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com