ಕೆ.ಜಿ.ಎಫ್ ಅವನೇ ಶ್ರೀಮನ್ನಾರಣ ನಂತರ ಐದು ಭಾಷೆಗಳಲ್ಲಿ ಬರಲಿದೆ ಕನ್ನಡದ ಮತ್ತೊಂದು ಚಿತ್ರ

Published on

300 Views

ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ 5ಭಾಷೆಗಳಲ್ಲಿ ಸದ್ಯ ಕನ್ನಡ ಚಿತ್ರರಂಗದ್ದೆ ಸುದ್ದಿ. ಅದಕ್ಕೆ ಕಾರಣ ಯಶ್ ಅಭಿನಯದ ಕೆ.ಜಿ‌.ಎಫ್ ಹಾಗೂ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಣ ಚಿತ್ರಗಳು. ಭಾರಿ ಬಜೆಜ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಗಳು ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿವೆ. ಈ ಸಾಲಿಗೆ ಸದ್ಯ ಮತ್ತೊಂದು ಚಿತ್ರ ಸೇರ್ಪಡೆ ಯಾಗಲಿದೆ ಅದುವೇ”ಬೆಸ್ಟ್ ಫ್ರೆಂಡ್ಸ್‌” ಎಂಬ ಶೀರ್ಷಿಕೆಯ
ಸಿನಿಮಾ.

ಈ ಹಿಂದೆ ಬೆಂಗಳೂರ್ ಬಂದ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಟೇಶಿ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿ ತೆರೆಗೆ ತರುತ್ತಿದ್ದಾರೆ. ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ತುಳು ಭಾಷೆಯಲ್ಲಿ ಈ ಚಿತ್ರ ಜನವರಿ 04ರಿಂದ ತೆರೆಗೆ ಬರಲಿದೆ. ಲಯನ್ ವೆಂಕಟೇಶ್ ಅವರು ಈ ಚಿತ್ತವನ್ನು ನಿರ್ಮಾಣ ಮಾಡಿದ್ದಾರೆ. ನೈಜ ಘಟನೆಗಳ ಸುತ್ತ ಕಥೆ ಹೆಣೆದಿದ್ದು, ಮೇಘನಾ ಹಾಗೂ ದ್ರವ್ಯಾ ಶೆಟ್ಟಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‌

Copyright ©2026 . All Rights Reserved. privacy | terms Whatsapp: 9538193653 Email: hello@flixoye.com