ಬೆಲ್ಲಿ ಪಿಯರ್ಸಿಂಗ್‌ ಮೋಹಕ್ಕೆ ಸೋತ ಸಂಗೀತಾ..!

Published on

524 Views

ಬೆಲ್ಲಿ ಪಿಯರ್ಸಿಂಗ್‌ ಮೋಹಕ್ಕೆ ಸೋತ ಸಂಗೀತಾ..!

ಈ ಫೋಟೋನಾ ಸ್ವಲ್ಪ ಝೂಮ್​ ಹಾಕಿ ನೋಡಿ. ಈಕೆ ಸಂಗೀತ ಭಟ್‌, ಹುಮ್‌ ಎರಡನೇ ಸಲದ ಸಂಗೀತಾನೇ..! ಅರೇ ಫೋಟೋದಲ್ಲಿರೋ ಈ ಬ್ಯೂಟಿ ಮುಖ ನೋಡ್ತಾ, ಸೊಂಟ ನೋಡ್ತಾ ಇಲ್ಲೇನಿದೆ ಗುರು ಸ್ಪೆಷಲ್‌ ಅಂತ ಕೇಳ್ಬೇಡಿ. ಅಲ್ಲಿ ಸ್ವಲ್ಪ ಸೂಕ್ಷ್ಮವಾಗಿ ನೋಡಿ, ಸಂಗೀತ  ಮೇಡಂ ನಭದೊಳಗೆ ಏನೋ ಮಿಣ ಮಿಣ ಅಂತೈತೆ.

ಬೆಲ್ಲಿ ಪಿಯರ್ಸಿಂಗ್ ನಲ್ಲಿ ಮಿಂಚಿದ ಸಂಗೀತ ಭಟ್

ಎರಡನೇಯ ಸಲ ಚಿತ್ರದಲ್ಲಿ ನಟಿಸಿರುವ ಸಂಗೀತ ಭಟ್, ಬೆಲ್ಲಿ ಪಿಯರ್ಸಿಂಗ್ ಮಾಡಿಕೊಂಡು ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾರೆ. ಹೆಚ್ಚಾಗಿ ಸೆಲೆಬ್ರಿಟಿಗಳು ಟ್ಯಾಟ್ಯೂ ಹಾಕಿಸಿಕೊಂಡು ಅದನ್ನು ಅಪ್ಲೋಡ್ ಮಾಡುವುದನ್ನು ನೋಡಿದ್ದೇವೆ. ಆದ್ರೆ ಕನ್ನಡದ ನಟಿಯರಲ್ಲಿ ಹೊಕ್ಕಳಿಗೆ ಬೆಲ್ಲಿ ಪಿಯರ್ಸಿಂಗ್ ಹಾಕಿ ಅದನ್ನು ಅಪ್ಲೋಡ್ ಮಾಡಿ, ಸ್ಟೇಟಸ್ ಹಾಕಿರುವ ಸಂಗೀತ ಭಟ್ ಧೈರ್ಯ ವನ್ನು ಮೆಚ್ಚಲೇಬೇಕು. ತಮ್ಮ ಕ್ಯೂಟ್ ಲುಕ್ ನಿಂದ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಗೀತ ಭಟ್ ತಮ್ಮ ಅಭಿನಯದ ಬಿಡುಗಡೆಗೆ ತಯಾರಾಗಿರುವ ‘ಕಿಸ್ಮತ್’ ಮತ್ತು ‘ಅನುಕ್ತ’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈಗ ‘ ಅಳಿದು ಉಳಿದವರು’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಚಿರಚೀವಿ ಸರ್ಜ ಮತ್ತು ಬಾಲು ನಾಗೇಂದ್ರರವರ ಇನ್ನು ಹೆಸರಿಡದ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com