ಬಿಡುಗಡೆಯಾದ ರೊಮ್ಯಾಂಟಿಕ್ ‘ಬೀಸೋ ಗಾಳಿ’ ಕನ್ನಡ ಆಲ್ಬಂ ಸಾಂಗ್…

Published on

627 Views

ಡಾಲ್ವಿನ್ ಕೊಳಗಿರಿ ಸಂಯೋಜಿಸಿದ ರೊಮ್ಯಾಂಟಿಕ್ ಹಾಡು ‘ಬೀಸೋ ಗಾಳಿ’ ಎಪ್ರಿಲ್ 16 ಸಂಜೆ 5 ಗಂಟೆಗೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಪ್ರತಾಪದದ ಭಟ್ ಬರೆದ ಹಾಡನ್ನು ಡಾ.ಅಭಿಷೇಕ್ ರಾವ್ ಕೊರಾಡ್ಕಲ್ ಹಾಗೂ ಕೆಜಿಎಫ್ ಖ್ಯಾತಿಯ ಅಯ್ರಾ ಆಚಾರ್ಯ ಹಾಡಿದ್ದಾರೆ. ಗಮ್ಜಾಲ್ ಹಾಗೂ ಗಿರಿಗಿಟ್ ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ಡೇರಿಲ್ ಮಸ್ಕರೆನ್ಹಸ್ ಮಿಕ್ಸಿಂಗ್ ಮಾಡಿದ್ದಾರೆ. ವೀಡಿಯೋವನ್ನು ಸಂಪ್ರತಿ ಆಳ್ವ ನಿರ್ದೇಶಿಸಿದ್ದಾರೆ. ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ನಟ ಅವಿನಾಶ್ ಶೆಟ್ಟಿ ಹಾಗೂ ದೀಕ್ಷಾ ಸಾಲ್ಯಾನ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಜಯಂತ್ ಐತಾಳ್ ಫೋಟೋಗ್ರಫಿ ಮಾಡಿದ್ದಾರೆ. ರಿದ್ಧಿ ಸ್ಟುಡಿಯೋದ ವಿನಾಯಕ್ ಮಲ್ಯ ಅವರು ವಿಡಿಯೋ ಎಡಿಟಿಂಗ್ ಹಾಗೂ ಡ್ರೋನ್ ಚಿತ್ರೀಕರಣ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com