‘ಬೆಂಗಳೂರ್‍ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

Published on

417 Views

ಮಾದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಓಂಪ್ರಕಾಶ್ ನಿರ್ಮಿಸುತ್ತಿರುವ ಬೆಂಗಳೂರ್ ನಿಂದ ಕಾಶ್ಮೀರ್ ಚಿತ್ರಕ್ಕಾಗಿ ಕಡೆಯ ದೃಶ್ಯವೊಂದನ್ನು ಚಿತ್ತೀಕರಿಸಿದರು. ಅದೇನೆಂದರೆ, ಪೊಲೀಸ್ ಸ್ಟೇಷನ್ ಒಂದರಲ್ಲಿ ಪ್ರೀತಿಸಿದ ಹುಡುಗಿ ಆಕಸ್ಮಿಕವಾಗಿ ಕೊಲೆಯಾಗಿರುತ್ತಾಳೆ. ಆ ಕೊಲೆಯ ಕೇಸು ನಾಯಕನ ಮೇಲೆ ಬರುತ್ತದೆ. ವಿಚಾರಣೆಗಾಗಿ ಪೊಲೀಸ್ ಸ್ಟೇಷನ್‍ಗೆ ನಾಯಕ ಹಾಗೂ ಸ್ನೇಹಿತನನ್ನು ಕರೆದುಕೊಂಡು ವಿಚಾರಣೆ ಮಾಡುವ ದೃಶ್ಯವನ್ನು ಕಳೆದ ವಾರ ಭೂಮಿಕಾ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಳ್ಳುವ ಮೂಲಕ ಚಿತ್ರೀಕರಣ ಮುಗಿದಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.

ಓಂ ಪ್ರಕಾಶ್ ನಾಯಕ್ ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಪ್ರಕಾಶ್ ಛಾಯಾಗ್ರಹಣ, ಶಿವಕುಮಾರ್ ಸ್ವಾಮಿ ಸಂಕಲನ, ರಾಜ್ ದೇವ್ ನೃತ್ಯ ನಿರ್ದೇಶನ, ಮಧುರ ಸಂಗೀತ, ತರ್ಜುನ್ ಶಂಕರ್ ಬಾಬು ಸಹ ನಿರ್ದೇಶನವಿದೆ. ಓಂ ಪ್ರಕಾಶ್ ನಾಯಕ್, ಸ್ಮೈಲ್ ಶಿವು, ಉಮಾದೇವಿ, ಅಶ್ವಿನಿ, ಎಂ.ಡಿ. ಕೌಶಿಕ್, ಭಾಗೀರಥಿ, ಸಾಗರ್, ಬಾಲು ಮುಂತಾದವರ ತಾರಾಬಳಗವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com