ಗೊತ್ತಿಲ್ಲದ ಪಾರಿವಾಳದ ಲೋಕಕ್ಕೆ ನಮ್ಮನ್ನೆಲ್ಲ ಕರೆದೊಯ್ಯಲು ಸಜ್ಜಾಗಿರುವ ಚಿತ್ರವೇ “ಬಜಾರ್”.
ಪ್ರೀತಿಗಿಂತ ,ಸೋತ ಪ್ರೀತಿಯ ಅನುಭವವೇ ಬೇರೆ ಎಂದು ಹೇಳುವ ನಾಯಕನ ತೊಡಲಾಟ ಚಿತ್ರದಲ್ಲಿ, ಪ್ರೇಕ್ಷಕರ ಮನದಲ್ಲಿ ಬೇರೊಂದು ಲೋಕಕ್ಕೆ ಕರೆದೊಯ್ಯುವಲ್ಲಿ ಎರಡು ಮಾತಿಲ್ಲ. ಪಾರಿವಾಳ ಪ್ರೀತಿ ಮತ್ತು ಶಾಂತಿಯ ಸಂಕೇತ.
ಪಾರಿವಾಳ ಹಾರಾಟ ಸ್ಪರ್ಧೆಯಲ್ಲಿ ಶೋಖದಾರ್ ಹಾರಿಸೋ ಪಾರಿವಾಳದ ಹಾರಾಟದ ಕುರಿತು ನಾಯಕ ಹೇಳಿರೋ “ಪಾರಿವಾಳ ನೀನ್ ಹಾರಿದ್ರೆ ನಾನು ಹಾರ್ತೀನಿ, ನೀನ್ ಸತ್ತರೆ ನಾನು ಸಾಯ್ತೀನಿ “ಅನ್ನೋ ಮಾತು ಜೀವನವನ್ನು ಪತಂಗ ಮತ್ತು ಪಾತಾಳಕ್ಕೆ ಹೋಲಿಸಿದಂತಿದೆ. ಹಾರಾಟ,ಹೋರಾಟವೇ ಜೀವನ ; ಇಲ್ಲವೆಂದರೆ ಪಾತಾಳಕ್ಕೆ ತಳ್ಳುತ್ತಾರೆ.ಸೈನಿಕ ಪ್ರಾಣ ಬಿಡುವನೇ ಹೊರತು ಯುದ್ಧವನ್ನಲ್ಲ ಅನ್ನುವ ಮಾತು ಪ್ರತಿಯೊಬ್ಬ ಭಾರತೀಯನ ಮೈ ರೋಮಾಂಚನವಾಗುವಂತೆ ಮಾಡುತ್ತದೆ. ಸೋತ ಪ್ರೀತಿಯ ಅನುಭವವೇ ಬೇರೆನಾ…?
ನಂಬರ್ ಒನ್ ಶೋಕದಾರ್ ಆಗೋ ನಾಯಕನ ಕನಸು ನನಸಾಗುವುದೇ…?
ಇವೆಲ್ಲವನ್ನು ತಿಳಿಯಬೇಕಾದಲ್ಲಿ ಪೆಬ್ರವರಿ ೧ ರಂದು ತೆರೆಕಾಣಲಿರುವ ಸಿಂಪಲ್ ಸುನಿ ನಿರ್ದೇಶನದ “ಬಜಾರ್” ಚಿತ್ರದಲ್ಲಿ ಧನವೀರ್ ಗೌಡ ನಾಯಕನಾಗಿ,ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದು, ರವಿ ಬಸ್ರೂರ್ ಸಂಗೀತ ಮನಮೋಹಕಗೊಳಿಸುವ ಉತ್ಸಾಹದಲ್ಲಿದೆ.ಟ್ರೇಲರ್ ನಲ್ಲಿ ಸದ್ದು ಮಾಡಿರೊ “ಬಜಾರ್” ಚಿತ್ರ ಪರದೆ ಮೇಲೆ ಅಬ್ಬರಿಸೊ ನಿರೀಕ್ಷೆಯಲ್ಲಿದೆ.