ಸುನಿ ಪಾಲಿನ ಅದೃಷ್ಟದ ಚಿತ್ರಮಂದಿರದಲ್ಲಿ ಬಜಾರ್

Published on

411 Views


ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಸುನಿ ನಿರ್ದೇಶನದ ಚೊಚ್ಚಲ ಸಿನಿಮಾ. ಈ ಸಿನಿಮಾ ರಿಲೀಸ್ ಆದ ಚಿತ್ರಮಂದಿರದಲ್ಲೇ ಬಜಾರ್ ಚಿತ್ರವೂ ಕೂಡ ರಿಲೀಸ್ ಆಗ್ತಿರೋದು ವಿಶೇಷ . ಹೌದು ಮೆಜೆಸ್ಟಿಕ್ ನ ಅನುಪಮ ಚಿತ್ರಮಂದಿರದಲ್ಲಿ ಬಜಾರ್ ಸಿನಿಮಾ ಇದೇ ಶುಕ್ರವಾರ ಅಂದ್ರೆ ಫೆಬ್ರುವರಿ 1ನೇ ತಾರೀಖು ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಅನುಪಮ ಚಿತ್ರ ಮಂದಿರದಲ್ಲಿ ರಿಲೀಸ್ ಆಗಿ ಅಲ್ಲೇ ಯಶಸ್ವಿ 75ದಿನ ಪ್ರದರ್ಶನ ಕಂಡಿತ್ತು.

ಇದೀಗ ಬಜಾರ್ ಸಿನಿಮಾನೂ ಹಾಗೇ ಯಶಸ್ವಿಯಾಗಿ ಪ್ರದರ್ಶನವಾಗಲಿದೆ.. ಅವತ್ತು ಸುನಿ ಪಾಲಿಗೆ ಚೊಚ್ಚಲ ಸಿನಿಮಾ ಅದಾಗಿತ್ತು.. ಇವತ್ತು ನಾಯಕ ಧನ್ ವೀರ್ ಪಾಲಿಗೆ ಚೊಚ್ಚಲ ಸಿನಿಮಾ ಬಜಾರ್ ಆಗಿದ್ದು, ಸುನಿ ಅದೃಷ್ಟ ಧನ್ ವೀರ್ ಗೂ ಒಲಿಯಲಿ ಎಂದೂ ಎಲ್ಲಾ ಹಾರೈಸ್ತಿದ್ದಾರೆ…

Copyright ©2026 . All Rights Reserved. privacy | terms Whatsapp: 9538193653 Email: hello@flixoye.com